ಕರ್ನಾಟಕ

karnataka

ETV Bharat / city

C‌‌ovid-19 : ರಾಜ್ಯದಲ್ಲಿಂದು 470 ಮಂದಿಗೆ ಸೋಂಕು, 9 ಮಂದಿ ಸಾವು! - covid update in karnataka

ರಾಜಧಾನಿಯಲ್ಲಿ 232 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12,49,124ಕ್ಕೆ ಏರಿಕೆಯಾಗಿದೆ. 122 ಜನರು ಗುಣಮುಖರಾಗಿದ್ದು, ಈವರೆಗೆ 12,26,171 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಓರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,206 ಕ್ಕೇರಿದೆ. ಸದ್ಯ ನಗರದಲ್ಲಿ 6,746 ಸಕ್ರಿಯ ಪ್ರಕರಣಗಳಿವೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Oct 15, 2021, 7:14 PM IST

ಬೆಂಗಳೂರು :ರಾಜ್ಯದಲ್ಲಿಂದು 93,806 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 470 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,82,869ಕ್ಕೆ ಏರಿಕೆಯಾಗಿದೆ.

368 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, 29,35,238 ಜನರು ಗುಣಮುಖರಾಗಿದ್ದಾರೆ. ಇಂದು 9 ಮಂದಿ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,931ಕ್ಕೆ ಏರಿಕೆಯಾಗಿದೆ. 9671 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.0.50 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.91ರಷ್ಟಿದೆ.

ಬೆಂಗಳೂರಿನಲ್ಲಿ 232 ಮಂದಿಗೆ ಸೋಂಕು

ರಾಜಧಾನಿಯಲ್ಲಿ 232 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12,49,124ಕ್ಕೆ ಏರಿಕೆಯಾಗಿದೆ. 122 ಜನರು ಗುಣಮುಖರಾಗಿದ್ದು, ಈವರೆಗೆ 12,26,171 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಓರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,206 ಕ್ಕೇರಿದೆ. ಸದ್ಯ ನಗರದಲ್ಲಿ 6,746 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪ್ಡೇಟ್​​

  • ಅಲ್ಫಾ- 155
  • ಬೀಟಾ- 08
  • ಡೆಲ್ಟಾ- 1653
  • ಡೆಲ್ಟಾ ಪ್ಲಸ್- 04
  • ಡೆಲ್ಟಾ ಸಬ್ ಲೈನ್​​ ಏಜ್- 202
  • ಡೆಲ್ಟಾ ಸಬ್ ಲೈನ್​​ ಏಜ್ AY.12H -14
  • ಕಪ್ಪಾ- 160
  • ಈಟಾ- 01

ಇದನ್ನೂ ಓದಿ:23 ಕೋಟಿ ತಲುಪಿದ ಜಾಗತಿಕ ಕೋವಿಡ್‌ ಪ್ರಕರಣಗಳ ಸಂಖ್ಯೆ; ಅಮೆರಿಕದಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಸಾವು

ABOUT THE AUTHOR

...view details