ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಮೂರನೇ ಬಾರಿ 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ, ಮಹಾಮಾರಿಗೆ 67 ಜನ ಬಲಿ - ಬೆಂಗಳೂರು ಕೊರೊನಾ ಸುದ್ದಿ

ರಾಜ್ಯದಲ್ಲಿ ಸಕ್ರಿಯ 1,15,574 ಸೋಂಕಿತರು ಇದ್ದು, 847 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಳೆದ 7 ದಿನಗಳಲ್ಲಿ 2,10,342 ಜನರು ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಈವರೆಗೆ ರಾಜ್ಯದಲ್ಲಿ 52,60,160 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

karnataka-today-corona-positive-case-ten-thousand-cross-news
ರಾಜ್ಯದಲ್ಲಿ ಮೂರನೇ ಬಾರಿ 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ, ಮಹಾಮಾರಿಗೆ 67 ಜನ ಬಲಿ

By

Published : Oct 4, 2020, 8:07 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರೆದಿದ್ದು, ಇಂದು ಕೂಡ 10 ಸಾವಿರ ಗಡಿದಾಟಿದೆ.

ಇಂದು ಒಂದೇ ದಿನ 10,145 ಜನರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6,40,661 ಕ್ಕೆ ಏರಿಕೆ ಆಗಿದೆ. ಇಂದು 67 ಜನ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದು, 9286ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಇಂದು 7287 ಜನರು ಡಿಸ್ಜಾರ್ಜ್ ಆಗಿದ್ದು, ಒಟ್ಟು 5,15,782 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸಕ್ರಿಯ 1,15,574 ಸೋಂಕಿತರು ಇದ್ದು, 847 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಳೆದ 7 ದಿನಗಳಲ್ಲಿ 2,10,342 ಜನರು ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಈವರೆಗೆ ರಾಜ್ಯದಲ್ಲಿ 52,60,160 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಎರಡೂವರೆ ಲಕ್ಷ ದಾಟಿದ ಸೋಂಕಿತರ ಸಂಖ್ಯೆ:

ಕೊರೊನಾ ಸಿಟಿಯಾಗಿ ಮುಂದುವರೆದಿರುವ ಬೆಂಗಳೂರು ನಗರದಲ್ಲಿ ಎರಡೂವರೆ ಲಕ್ಷ ಗಡಿ ದಾಟಿದೆ. ‌ಇಂದು ರಾಜಧಾನಿಯಲ್ಲೇ 4,340 ಜನರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ 2,50,040ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 2681 ಡಿಸ್ಜಾರ್ಜ್ ಆಗಿದ್ದು, 1,92,043 ಗುಣಮುಖರಾಗಿದ್ದಾರೆ. ನಗರದಲ್ಲಿ ಇಂದು 22 ಸೋಂಕಿತರು ಮೃತರಾಗಿದ್ದು, 3,067ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಇನ್ನು 54,929 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಹತ್ತು ಸಾವಿರದ ಸೋಂಕಿತರು:

ದಿನಾಂಕ: 29-9-2020- 10,453
ದಿನಾಂಕ: 1-10-2020- 10,070
ದಿನಾಂಕ: 4-10-2020- 10,145

ABOUT THE AUTHOR

...view details