ಬೆಂಗಳೂರು: ಪ್ರಸ್ತುತ ನೈರುತ್ಯ ಮಾನ್ಸೂನ್ ರಾಜ್ಯಾದ್ಯಂತ ದುರ್ಬಲವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಅಲ್ಲಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ನೈರುತ್ಯ ಮಾನ್ಸೂನ್ ದುರ್ಬಲ: ಕರಾವಳಿ ಜಿಲ್ಲೆಗಳಿಗೆ 11, 12 ರಂದು ಎಲ್ಲೋ ಅಲರ್ಟ್ - ಹವಾಮಾನ ವರದಿ
ರಾಜ್ಯಾದ್ಯಂತ ನೈರುತ್ಯ ಮಾನ್ಸೂನ್ ದುರ್ಬಲವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಅಲ್ಲಲ್ಲಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 8 ರಿಂದ 10 ರವರೆಗೆ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಜೂನ್ 11, 12 ರಂದು ವ್ಯಾಪಕ ಮಳೆಯಾಗಲಿದೆ.
ಇನ್ನು ಕರಾವಳಿ ಜಿಲ್ಲೆಗಳಲ್ಲಿ ಜೂನ್ 8 ರಿಂದ 10 ರವರೆಗೆ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಜೂನ್ 11, 12 ರಂದು ವ್ಯಾಪಕ ಮಳೆಯಾಗಲಿದೆ. ಈ ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದರು.
ಇಂದು ಕರಾವಳಿ ಜಿಲ್ಲೆಗಳ ಕೆಲವು ಕಡೆ ಮಳೆಯಾಗಿದೆ. ಉತ್ತರ ಒಳನಾಡಿನ ಒಂದೆರಡು ಕಡೆ ಮಾತ್ರ ಮಳೆಯಾಗಿದೆ. ದ.ಒಳನಾಡಿನಲ್ಲಿ ಒಣಹವೆ ಇದೆ. ನೈರುತ್ಯ ಮಾನ್ಸೂನ್ ರಾಜ್ಯಾದ್ಯಂತ ದುರ್ಬಲವಾಗಿದೆ. ಕಾರವಾರದಲ್ಲಿ 1 ಸೆಂ.ಮೀ, ಕಲಬುರ್ಗಿಯಲ್ಲಿ 1ಸೆಂ.ಮೀ ಮಳೆಯಾಗಿದೆ ಎಂದರು.