ಕರ್ನಾಟಕ

karnataka

ETV Bharat / city

ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್ - ಉಕ್ರೇನ್​ನಲ್ಲಿ ಭಾರತದ ವಿದ್ಯಾರ್ಥಿಗಳ ರಕ್ಷಣೆ

ಬುಧವಾರ ಒಂದು ತುರ್ತು ಮೆಸೇಜ್ ನೀಡಲಾಗಿತ್ತು. ಅದರಂತೆ ಅವರೆಲ್ಲ ಒಂದು ಜಾಗಕ್ಕೆ ಹೋಗಿ ತಲುಪಿದ್ದಾರೆ. ಈವರೆಗೆ ಒಟ್ಟು 149 ಮಂದಿ ವಿದ್ಯಾರ್ಥಿಗಳು ಮರಳಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.

karnataka-students-in-ukraine
ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

By

Published : Mar 3, 2022, 2:13 PM IST

Updated : Mar 3, 2022, 3:43 PM IST

ಬೆಂಗಳೂರು: ಯುದ್ಧಪೀಡಿತ ಉಕ್ರೇನ್​​ನಲ್ಲಿ 693 ಮಂದಿ ಕನ್ನಡಿಗರು ಸಿಲುಕಿದ್ದು, ಈವರೆಗೆ 149 ಮಂದಿ ತಾಯ್ನಾಡಿಗೆ ಮರಳಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೆ ಸಿಕ್ಕ ಮಾಹಿತಿ ಪ್ರಕಾರ 693 ಜನ ಕನ್ನಡಿಗರು ಉಕ್ರೇನ್​​ನಲ್ಲಿ ಸಿಲುಕಿದ್ದಾರೆ.

11 ಬ್ಯಾಚ್ ನಲ್ಲಿ 63 ಜನ ಕನ್ನಡಿಗರು ಇಂದು ತವರಿಗೆ ಬರಲಿದ್ದಾರೆ. ಇಂದು ಒಂದೇ ದಿನ 63 ಜನ ಬರುತ್ತಿದ್ದಾರೆ. ನಾಳೆ 16 ವಿಮಾನಗಳ ಮೂಲಕ ವಿದ್ಯಾರ್ಥಿಗಳು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬುಧವಾರ ಒಂದು ತುರ್ತು ಮೆಸೇಜ್ ನೀಡಲಾಗಿತ್ತು. ಅದರಂತೆ ಅವರೆಲ್ಲಾ ಒಂದು ಜಾಗಕ್ಕೆ ಹೋಗಿ ತಲುಪಿದ್ದಾರೆ. ಈವರೆಗೆ ಒಟ್ಟು 149 ಮಂದಿ ವಿದ್ಯಾರ್ಥಿಗಳು ಮರಳಿದ್ದಾರೆ. ಇಂದು ಸಂಜೆ 6.30ಕ್ಕೆ ಬೆಂಗಳೂರಿಗೆ ಒಂದು ವಿಮಾನ ಬರಲಿದೆ ಎಂದು ವಿವರಿಸಿದರು.

ನೋಡಲ್ ಅಧಿಕಾರಿ ಮನೋಜ್ ರಾಜನ್

ಇದನ್ನೂ ಓದಿ:ತನ್ನ ದೇಶದ ಮೇಲೆಯೇ ಯುದ್ಧಕ್ಕೆ ಬಂದು ಬಳಲಿದ ರಷ್ಯಾ ಯೋಧನ ಸಂತೈಸಿದ ಉಕ್ರೇನ್​ ಮಹಾತಾಯಿ!!

ನವೀನ್ ಮೃತದೇಹ ತರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಸಿಎಂ ಸೇರಿ ಎಲ್ಲರೂ ಪ್ರಯತ್ನಿಸುತ್ತಿದ್ದೇವೆ. ವಿದೇಶಾಂಗ ಸಚಿವಾಲಯದ ಜೊತೆ ಎಲ್ಲರೂ ಸಂಪರ್ಕದಲ್ಲಿ ಇದ್ದಾರೆ.‌ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

Last Updated : Mar 3, 2022, 3:43 PM IST

ABOUT THE AUTHOR

...view details