ಬೆಂಗಳೂರು:ರಾಜ್ಯದಲ್ಲಿಂದು 3,979 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 138 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇಂದು 9,768 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 26,78,473 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ 1,10,523 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 28,23,444ಕ್ಕೆ ಏರಿಕೆಯಾಗಿದ್ದು, ಈವರೆಗೆ 34,425 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿಂದು 3,979 ಮಂದಿಗೆ ಕೋವಿಡ್ ಪಾಸಿಟಿವ್, 138 ಮಂದಿ ಸಾವು - ರಾಜ್ಯದಲ್ಲಿಂದು 3979 ಜನರಲ್ಲಿ ಕೋವಿಡ್ ಪಾಸಿಟಿವ್
ಈವರೆಗೆ 26,78,473 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ 1,10,523 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 28,23,444ಕ್ಕೆ ಏರಿಕೆಯಾಗಿದ್ದು, ಈವರೆಗೆ 34,425 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಓದಿ: 'ಕೊರೊನಾಗೆ ಲಸಿಕೆಯೇ ಮದ್ದು, ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ವ್ಯಾಕ್ಸಿನ್'
ಬೆಂಗಳೂರು ನಗರದಲ್ಲಿ ಇಂದು 969 ಜನ ಸೋಂಕಿಗೆ ಒಳಗಾಗಿದ್ದು, 14 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 07, ಬಳ್ಳಾರಿಯಲ್ಲಿ 67, ಬೆಳಗಾವಿ 98, ಬೆಂ.ಗ್ರಾಮಾಂತರ 81, ಬೀದರ್ 18, ಚಾಮರಾಜನಗರ 64, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 110, ಚಿತ್ರದುರ್ಗ 33, ದ.ಕನ್ನಡ 498, ದಾವಣಗೆರೆ 118, ಧಾರವಾಡ 62, ಗದಗ 18, ಹಾಸನ 336, ಹಾವೇರಿ 28, ಕಲಬುರಗಿ 31, ಕೊಡಗು 115, ಕೋಲಾರ 103, ಕೊಪ್ಪಳ 18, ಮಂಡ್ಯ 137, ಮೈಸೂರು 404, ರಾಯಚೂರು 16, ರಾಮನಗರ 32, ಶಿವಮೊಗ್ಗ 206, ತುಮಕೂರು 128, ಉಡುಪಿ 123, ಉ.ಕನ್ನಡ 104, ವಿಜಯಪುರ 4, ಯಾದಗಿರಿಯಲ್ಲಿ 07 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.