ಕರ್ನಾಟಕ

karnataka

By

Published : Aug 6, 2021, 4:44 PM IST

Updated : Aug 6, 2021, 10:16 PM IST

ETV Bharat / city

ವಿದ್ಯಾರ್ಥಿಗಳ ಗಮನಕ್ಕೆ: ಆಗಸ್ಟ್​​ 23 ರಿಂದ 9-12ನೇ ತರಗತಿಗಳು ಆರಂಭ..!

ರಾಜ್ಯದಲ್ಲಿ ಶಾಲಾರಂಭಕ್ಕೆ ಖಾಸಗಿ ಶಾಲಾ ಸಂಘಟನೆಗಳಿಂದ ಭಾರಿ ಒತ್ತಾಯ ಕೇಳಿ ಬಂದಿತ್ತು. ಮಕ್ಕಳ ಕಲಿಕಾ ದೃಷ್ಟಿಯಿಂದ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನ ತೆರೆಯುವಂತೆ ಪೋಷಕರು ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಆಗಸ್ಟ್​​ 23 ರಿಂದ 9-12ನೇ ತರಗತಿಗಳು ಆರಂಭಕ್ಕೆ ಸರ್ಕಾರ ಸಮ್ಮತಿ ನೀಡಿದೆ.

karnataka-state-high-school-starts-from-august-23
ಶಾಲೆ ಆರಂಭ

ಬೆಂಗಳೂರು: ತರಗತಿ ಆರಂಭಿಸುವಂತೆ ಖಾಸಗಿ ಶಾಲಾ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ಹಾಗೂ ಮಕ್ಕಳ ಕಲಿಕಾ ದೃಷ್ಟಿಯಿಂದ ಆಗಸ್ಟ್​​ 23 ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಶಾಲಾ ಆರಂಭಕ್ಕೆ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದೆ.

ಈ ಕುರಿತು ಮಾತಾನಾಡಿರುವ ರೂಪ್ಸಾ ಸಂಘದ ಹಾಲನೂರು ಲೇಪಾಕ್ಷಿ, ಸರ್ಕಾರಕ್ಕೆ ಶಾಲಾರಂಭ ಕುರಿತು ಕಳೆದೊಂದು ವರ್ಷದಿಂದ ಒತ್ತಾಯ ಮಾಡಲಾಗಿತ್ತು. ಕಳೆದ ವಾರ ಗಡುವು ನೀಡಿದಾಗ ಸಿಎಂ ಭರವಸೆ ನೀಡಿದ್ದರು. ಇದೀಗ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ಅಲ್ಲದೇ, ಮುಂದಿನ ದಿನಗಳಲ್ಲಿ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಶಾಲೆ ಆರಂಭದ ಕುರಿತು ರೂಪ್ಸಾ ಸಂಘದ ಹಾಲನೂರು ಲೇಪಾಕ್ಷಿ ಹೇಳಿಕೆ

ಈ ಕುರಿತಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯಿಸಿ, ಶಾಲಾರಂಭ ಮಾಡುತ್ತಿರುವ ಸ್ವಾಗತಾರ್ಹ. ಆದರೆ, ಪ್ರಾಥಮಿಕ ಹಂತದ ಮಕ್ಕಳಿಗೆ ಕಲಿಕಾ ನಷ್ಟವಾಗಿದ್ದು, ಆದಷ್ಟು ಬೇಗ ಆ ತರಗತಿಗಳನ್ನ ಪ್ರಾರಂಭಿಸಬೇಕು. ಆದ್ಯತೆ ಮೇರೆಗೆ ಪೋಷಕರಿಗೆ ಲಸಿಕಾಕರಣ ಆಗಬೇಕು‌. ತಜ್ಞರ ಸೂಚನೆಯಂತೆ ಶಾಲಾರಂಭ ಮಾಡಲಾಗುವುದು ಹಾಗೂ ಬೇಕಾದ ತಯಾರಿ ನಡೆಸಲಾಗುವುದು ಎಂದು ತಿಳಿಸಿದರು.

Last Updated : Aug 6, 2021, 10:16 PM IST

ABOUT THE AUTHOR

...view details