ಬೆಂಗಳೂರು:ಬಿಡಿಎ ಮೇಲೆ ಎಸಿಬಿ ಬೃಹತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟ್ರ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 40 ಎಫ್‌ಐಆರ್ ದಾಖಲು ಮಾಡಲು ಅನುಮತಿ ಕೇಳಿದ್ದ ಎಸಿಬಿಗೆ ರಾಜ್ಯ ಸರ್ಕಾರ 25 ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಲು ಅನುಮತಿ ನೀಡಿದೆ.
ಓದಿ:'ಈಗ ಖರೀದಿಸಿ, ನಂತರ ಪಾವತಿಸಿ'.. 2026 ಕ್ಕೆ 56 ಬಿಲಿಯನ್ ಡಾಲರ್ಸ್ಗೆ ತಲುಪಲಿದೆ ಈ ವಿಭಾಗ: ಹೆಚ್ಡಿಎಫ್ಸಿ
ನಗರಾಭಿವೃದ್ಧಿ ಇಲಾಖೆಯಿಂದ 25 ಪ್ರಕರಣ ದಾಖಲು ಮಾಡಲು ಅನುಮತಿ ದೊರೆತಿದೆ. ದಾಳಿ ವೇಳೆ ಸುಮಾರು 200 ಕೋಟಿಗೂ ಅಧಿಕ ಅವ್ಯವಹಾರವನ್ನು ಎಸಿಬಿ ಪತ್ತೆ ಮಾಡಿತ್ತು. ಕಳೆದ ವರ್ಷ ಎಸಿಬಿ ಬಿಡಿಎ ಕಚೇರಿ ಮೇಲೆ ಬೃಹತ್ ದಾಳಿ ನಡೆಸಿತ್ತು. ಸದ್ಯ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುವ ಅಧಿಕಾರಿಗಳು ಸೇರಿದಂತೆ ಕೆಎಸ್ಎ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಎಫ್ಡಿಎ ಅಧಿಕಾರಿಗಳ ಸೇರಿ 25 ಭ್ರಷ್ಟ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.