ಕರ್ನಾಟಕ

karnataka

ETV Bharat / city

ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ - ಬೆಂಗಳೂರು ಲೇಟೆಸ್ಟ್​ ಸುದ್ದಿ

ನಗರದ ಸ್ವಾಂತಂತ್ರ್ಯ ಉದ್ಯಾನದ ಹತ್ತಿರ ಕೆಇಆರ್​ಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ವಿದ್ಯುತ್ ಸರಬರಾಜು ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.

protest
ಪ್ರತಿಭಟನೆ

By

Published : Oct 22, 2020, 5:40 PM IST

Updated : Oct 22, 2020, 6:01 PM IST

ಬೆಂಗಳೂರು:ವಿದ್ಯುತ್ ಸರಬರಾಜು ಕಂಪನಿಗಳಿಗೆ ತುಂಡು ಗುತ್ತಿಗೆ ನೀಡುವುದರ ವಿಚಾರವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ನೀಡಿದ್ದರೂ ಅಸಡ್ಡೆ ತೋರುತ್ತಿದ್ದು, ಹೊಸ ಕೆಇಆರ್​ಸಿ ನಿಯಮಗಳು ಕೆಳ ಮತ್ತು ಮಧ್ಯಮ ವರ್ಗದ ಗ್ರಾಹಕರು ಮೂಲ ಸೌಕರ್ಯ ಶುಲ್ಕದ ಹಣ ಪಾವತಿಸುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್ ಎಂ ಕೃಷ್ಣ ತಿಳಿಸಿದರು.

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ

ಸ್ವಾಧೀನ ಪತ್ರವನ್ನು ಕಡ್ಡಾಯಗೊಳಿಸಿ ಹೊಸದಾಗಿ ನಿರ್ಮಿಸಿರುವ ವಸತಿ ವಾಣಿಜ್ಯ ಸುಮಾರು 12 ಸಾವಿರಕ್ಕೂ ಅಧಿಕ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಎಸ್ಕಾಂಗಳು ಕಲ್ಪಿಸುತ್ತಿಲ್ಲ ಇದರಿಂದ ಕಟ್ಟಡ ಮಾಲೀಕರು ಸಂಕಷ್ಟಕ್ಕೀಡಾಗಿದ್ದರೆ ಎಂದರು.

ನಗರದ ಸ್ವಾತಂತ್ರ್ಯಉದ್ಯಾನದ ಹತ್ತಿರ ಕೆಇಆರ್​ಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ವಿದ್ಯುತ್ ಸರಬರಾಜು ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಬಂದಿದ್ದ ಪದಾಧಿಕಾರಿಗಳು, ಸದಸ್ಯರು ಗ್ರಾಹಕರಿಗೆ ನಿತ್ಯ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಘೋಷಣೆಗಳನ್ನು ಕೂಗಿದರು.

ರಾಜ್ಯಾದ್ಯಂತ ರೈತರ ಪಂಪ್​​​ಸೆಟ್​​​​ಗಳಿಗೆ ನೀರಾವರಿ ಸಂಪರ್ಕ ಹಾಗೂ ಗಂಗಾ ಕಲ್ಯಾಣ ಕುಡಿಯುವ ನೀರು ಯೋಜನೆಗಯಲ್ಲಿ ವಿದ್ಯುತ್ ಸಂಪರ್ಕ ಸಮಯಕ್ಕೆ ಸಿಗುತ್ತಿಲ್ಲ. ಎಲ್ಲ ವಿದ್ಯುತ್​ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್ ಮೊತ್ತದ 900 ಕೋಟಿ ರೂಪಾಯಿಗಳ ಟೆಂಡರ್ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಹಾಲಿ ವಿದ್ಯುತ್ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆಯುತ್ತಿದ್ದು, ಕೋಟ್ಯಂತರ ರೂ. ಗುತ್ತಿಗೆದಾರರಿಗೆ ಪಾವತಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರಿ ಪಡಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಗುತ್ತಿಗೆದಾರರು ತಿಳಿಸಿದರು.

Last Updated : Oct 22, 2020, 6:01 PM IST

ABOUT THE AUTHOR

...view details