ಕರ್ನಾಟಕ

karnataka

ETV Bharat / city

ಉಭಯ ಸದನದಲ್ಲಿ ಕರ್ನಾಟಕ ಸ್ಟಾಂಪ್, ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕಗಳ ಮಂಡನೆ

ಉಭಯ ಸದನದಲ್ಲಿ ಕರ್ನಾಟಕ ಸ್ಟಾಂಪ್ ತಿದ್ದುಪಡಿ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕಗಳ ಮಂಡಿಸಲಾಯಿತು.

Karnataka Stamp Amendment, Criminal Law Amendment presented in joint session, Karnataka joint session, ಕರ್ನಾಟಕ ಸ್ಟಾಂಪ್ ತಿದ್ದುಪಡಿ, ಜಂಟಿ ಅಧಿವೇಶನದಲ್ಲಿ ಕ್ರಿಮಿನಲ್ ಕಾನೂನು ತಿದ್ದುಪಡಿ ಮಂಡನೆ, ಕರ್ನಾಟಕ ಉಭಯ ಅಧಿವೇಶನ,
ಮಂಡನೆ

By

Published : Feb 17, 2022, 4:36 AM IST

ಬೆಂಗಳೂರು :ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ ಹಾಗೂ ಕ್ರಿಮಿನಲ್ ಕಾನೂನು ತಿದ್ದುಪಡಿ ಆಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಕಂದಾಯ ಸಚಿವ ಆರ್. ಅಶೋಕ್, ನೊಂದಾಯಿತ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ಮಾರಾಟ ಮಾಡಿದ ದಿನಾಂಕದಂದು ಇರುವ ಮಾರುಕಟ್ಟೆಯ ಮೌಲ್ಯದ ಮುದ್ರಾಂಕ ಶುಲ್ಕ ಪಾವತಿಸುವ ಸಂಬಂಧ ಕರ್ನಾಟಕ ಸ್ಟಾಂಪ್​ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.

ಸಹಕಾರ ಸಂಘಗಳ ಅಧಿನಿಯಮದಡಿಯಲ್ಲಿ ನೊಂದಾಯಿಸಿದ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದಿಂದ ಹಂಚಿಕೆಯಾದ ನಿವೇಶನವನ್ನು ಭೋಗ್ಯ ಮತ್ತು ಮಾರಾಟ ಕರಾರು ಮಾಡಿಕೊಳ್ಳಲಾಗುತ್ತದೆ. ಅಂತಹ ಮಾಡಿಕೊಂಡ ಕರಾರನ್ನು ಬರೆದುಕೊಟ್ಟ ದಿನಾಂಕದಂದು ಇದ್ದ ನಿವೇಶನದ ಮೌಲ್ಯದ ಮೇಲೆ ಇರಬೇಕು. ಇದರಿಂದ ಅಂದಾಜು ಐದರಿಂದ ಆರು ಕೋಟಿ ರೂ. ವಾರ್ಷಿಕವಾಗಿ ಸರ್ಕಾರಕ್ಕೆ ಕೊರತೆಯಾಗಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಓದಿ:ಹನುಮಂತನ ಜನ್ಮಸ್ಥಳದ ಸೌಂದರ್ಯೀಕರಣ ಕಾಮಗಾರಿ ಆರಂಭ

ಇದೇ ಸಂದರ್ಭದಲ್ಲಿ ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಿಂದ ಜಪ್ತಿಯಾದ ವಸ್ತುಗಳು ರಾಜ್ಯ ಸರ್ಕಾರ ತೆಗೆದುಕೊಳ್ಳಲು ಬರುವುದಿಲ್ಲ. ಅಪರಾಧದಿಂದ ಬಂದ ವಸ್ತುಗಳ ತನಿಖೆಗೆ ಮತ್ತು ಜಪ್ತಿ ಮಾಡಲು ಜಾರಿ ನಿರ್ದೇಶನಾಲು ಮಾತ್ರ ಅಧಿಕೃತ ಏಜೆನ್ಸಿಯಾಗಿರುತ್ತದೆ. ಇಡಿ ತನ್ನ ಇಚ್ಛೆಯಗುಣವಾಗಿ ರಾಜ್ಯ ಸರ್ಕಾರದಿಂದ ಪ್ರಕರಣಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ಪ್ರತಿ ವರ್ಷ ಬಹಳಷ್ಟು ದೊಡ್ಡ ಸಂಖ್ಯೆಯ ಆರ್ಥಿಕ ಅಪರಾಧಗಳನ್ನು ಪ್ರಕರಣಗಳನ್ನು ನೊಂದಾಯಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಇರುವ ಕಾನೂನಿನಲ್ಲಿ ಜಪ್ತಿ ಮಾಡಲು ಅವಕಾಶ ಇಲ್ಲದಿರುವ ಕಾರಣ ರಾಜ್ಯವು ಅಸಹಾಯಕವಾಗಿದೆ. ಹೀಗಾಗಿ ವಿಧೇಯಕಕ್ಕೆ ತಿದ್ದುಪಡಿ ತಂದು ಆರ್ಥಿಕ ಅಪರಾಧಗಳಿಗೊಳಗಾದವರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details