ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 28,723 ಕೋವಿಡ್​ ಕೇಸ್​ ಪತ್ತೆ: ಬೆಂಗಳೂರಲ್ಲೇ 20 ಸಾವಿರ ಮಂದಿಗೆ ಸೋಂಕು

ರಾಜ್ಯದಲ್ಲಿ ಇಂದು 28,723 ಕೋವಿಡ್ ಕೇಸ್​ಗಳು ವರದಿಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 20,121 ಮಂದಿಗೆ ವೈರಸ್ ಬಾಧಿಸಿದೆ.

karnataka covid
ರಾಜ್ಯದಲ್ಲಿಂದು 28,723 ಕೋವಿಡ್​ ಕೇಸ್​ ಪತ್ತೆ

By

Published : Jan 14, 2022, 5:59 PM IST

Updated : Jan 14, 2022, 7:48 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿದೆ. ನಿನ್ನೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿತ್ತು. ಆದರೆ ಇಂದು ಹೊಸದಾಗಿ 28,723 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.

ರಾಜಧಾನಿಯದ್ದೇ ಸಿಂಹಪಾಲು:

ಇಂದು ವರದಿಯಾದ 28,723 ಕೇಸ್​ಗಳು ಹಾಗೂ 14 ಸಾವಿನ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 20,121 ಮಂದಿಗೆ ವೈರಸ್​ ಅಂಟಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 3,105 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, 7 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 16,443ಕ್ಕೆ ಏರಿದೆ. ಸದ್ಯ 1,09,312 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ 825 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶದಿಂದ 176 ಪ್ರಯಾಣಿಕರು ಬಂದಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್​​ ಶೇ.12.98ರಷ್ಟಿದೆ. ಇಂದು ಒಂದೇ ದಿನ 2,21,205 ಜನರಿಗೆ ಕೋವಿಡ್​ ಟೆಸ್ಟ್ ಮಾಡಲಾಗಿದೆ. ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ತಿಳಿಸಿದ್ದಾರೆ.

ರೂಪಾಂತರಿ ಮಾಹಿತಿ:

ಅಲ್ಪಾ - 156

ಬೇಟಾ - 08

ಡೆಲ್ಟಾ - 2,937

ಡೆಲ್ಟಾ ಸಬ್ ಲೈನ್ ಏಜ್ - 1,350

ಕಪ್ಪಾ - 160

ಈಟಾ - 01

ಒಮಿಕ್ರಾನ್ - 479

ಇದನ್ನೂ ಓದಿ: ಕೊರೊನಾ ಸ್ಫೋಟ: ರಾಜ್ಯದಲ್ಲಿ ಲಾಕ್​​ಡೌನ್ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು?

Last Updated : Jan 14, 2022, 7:48 PM IST

ABOUT THE AUTHOR

...view details