ಕರ್ನಾಟಕ

karnataka

ETV Bharat / city

ವಿದ್ಯಾರ್ಥಿಗಳೇ ಗಮನಿಸಿ:  ಮಧ್ಯವಾರ್ಷಿಕ ಪರೀಕ್ಷೆಯ ಸಮಯ ಬದಲಾವಣೆ ಮಾಡಿದ ಪಿಯು ಬೋರ್ಡ್ - PUC exam timings

2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯ ಪರೀಕ್ಷಾ ಸಮಯವನ್ನು ಬೆಳಗ್ಗೆ 09-00 ರಿಂದ 12.15 ರವರೆಗೆ ಹಾಗೂ ಮಧ್ಯಾಹ್ನದ ಅವಧಿಯನ್ನು 02-00 ರಿಂದ 05.15 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಮಳೆಗಾಲದ ಹಿನ್ನೆಲೆ, ಪರೀಕ್ಷೆಯ ಅವಧಿಯನ್ನು ಬದಲಾವಣೆಗೊಳಿಸಲಾಗಿದೆ.

karnataka-puc-mid-term-examination-time-change
ಪಿಯು ಬೋರ್ಡ್

By

Published : Dec 4, 2021, 4:37 PM IST

Updated : Dec 4, 2021, 7:00 PM IST

ಬೆಂಗಳೂರು: 2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಸದ್ಯ ವೇಳಾಪಟ್ಟಿಯಲ್ಲಿ ಪರೀಕ್ಷಾ ಸಮಯವನ್ನು ಬೆಳಗ್ಗೆ 09-00 ರಿಂದ 12.15 ರವರೆಗೆ ಹಾಗೂ ಮಧ್ಯಾಹ್ನದ ಅವಧಿಯನ್ನು 02-00 ರಿಂದ 05.15 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಮಳೆಗಾಲದ ದಿನಗಳಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.

PUC exam timings: ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಗಳ ಮೇರೆಗೆ ಬೆಳಗಿನ ಅವಧಿಯ ಪರೀಕ್ಷಾ ಸಮಯವನ್ನು ಮಾತ್ರ 09-00 ರಿಂದ 12-15ರ ಬದಲಿಗೆ 09-30 ರಿಂದ 12-45 ರವರೆಗೆ ನಡೆಸಲು ತೀರ್ಮಾನಿಸಿ ಆದೇಶಿಸಿದೆ. ಉಳಿದಂತೆ ಪರೀಕ್ಷಾ ದಿನಾಂಕಗಳಲ್ಲಿ ಹಾಗೂ ಮಧ್ಯಾಹ್ನದ ಪರೀಕ್ಷಾ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ಪಿಯು ಬೋರ್ಡ್ ತಿಳಿಸಿದೆ.

  • ಪರೀಕ್ಷಾ ವೇಳಾಪಟ್ಟಿ ಹೀಗಿದೆ
  1. ಡಿಸೆಂಬರ್ 9 - ಭೌತಶಾಸ್ತ್ರ ಮತ್ತು ಇತಿಹಾಸ
  2. ಡಿಸೆಂಬರ್ 10- ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬಿಕ್, ಫ್ರೆಂಚ್
  3. ಡಿಸೆಂಬರ್ 11- ಅರ್ಥಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ
  4. ಡಿಸೆಂಬರ್16- ಸಮಾಜಶಾಸ್ತ್ರ, ಗಣಿತ
  5. ಡಿಸೆಂಬರ್ 17- ಹಿಂದಿ, ಉರ್ದು, ಸಂಸ್ಕೃತ
  6. ಡಿಸೆಂಬರ್ 18- ಇಂಗ್ಲಿಷ್
  7. ಡಿಸೆಂಬರ್ 20 - ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್, ಭೂ ವಿಜ್ಞಾನ, ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತ
  8. ಡಿಸೆಂಬರ್ 21-ಅಕೌಂಟೆನ್ಸಿ, ಶಿಕ್ಷಣ, ಹೋಮ್ ಸೈನ್ಸ್
  9. ಡಿಸೆಂಬರ್ 22-ಬಿಸಿನೆಸ್ ಸ್ಟಡೀಸ್, ಲಾಜಿಕ್, ಐಚ್ಛಿಕ ಕನ್ನಡ
  10. ಡಿಸೆಂಬರ್ - 23- ಜಿಯೋಗ್ರಫಿ, ಫಿಸಿಯಾಲಜಿ
Last Updated : Dec 4, 2021, 7:00 PM IST

ABOUT THE AUTHOR

...view details