ಕರ್ನಾಟಕ

karnataka

ETV Bharat / city

ಕಚೇರಿಗಳ ಅಲೆದಾಟಕ್ಕೆ ಬ್ರೇಕ್​.. ಭೂ ದಾಖಲೆಗಳ ಅರ್ಜಿ ಸ್ಥಿತಿಗತಿ, ನಕ್ಷೆ ಮುದ್ರಣ ಆನ್‌ಲೈನಲ್ಲೇ ಲಭ್ಯ

ನಾಗರಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರ ನಕ್ಷೆಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು ಎಂದು ಭೂ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

Bengaluru
ಬೆಂಗಳೂರು

By

Published : Apr 18, 2022, 6:40 AM IST

ಬೆಂಗಳೂರು: ಇನ್ನು‌‌ ಮುಂದೆ 11 ಇ, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳ ಮುದ್ರಣ ಮತ್ತು ಅರ್ಜಿಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು. ಈ ಸಂಬಂಧ ವೆಬ್ ಸೈಟ್​​​ನ್ನು ಅಭಿವೃದ್ಧಿ ಪಡಿಸಲಾಗಿದ್ದು, ನಾಗರಿಕರು ತಮ್ಮ‌ ಬೆರಳ ತುದಿಯಲ್ಲೇ ತಮ್ಮ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಭೂ ಮಾಪನ ಹಾಗೂ ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣ ಪಾವತಿಸುತ್ತಾರೆ. ಆದ್ದರಿಂದ, ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, http://103.138.196.154/service19/Report/ApplicationDetailsವೆಬ್‌ಸೈಟ್ ಲಿಂಕ್‌ನಲ್ಲಿ ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ವೆಬ್‌ಸೈಟ್ ಲಿಂಕ್‌ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದಾಗಿದೆ.

ನಾಗರಿಕರು ಅರ್ಜಿ ಸಲ್ಲಿಸುವಾಗಲೇ ಶುಲ್ಕ ಪಾವತಿ ಮಾಡಿರುವುದರಿಂದ, ಆನ್‌ಲೈನ್ ಸ್ಕೆಚ್‌ಗಳನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗಿಲ್ಲ. ನಾಗರಿಕರು ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೇ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಕರಣದ ತನಿಖೆ ಮುಗಿದ ಬಳಿಕವಷ್ಟೇ 402 ಪಿಎಸ್​ಐ ನೇಮಕಾತಿಗೆ ಪರೀಕ್ಷೆ: ಪ್ರವೀಣ್ ಸೂದ್

ABOUT THE AUTHOR

...view details