ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ನಾಯಕರಿಗೆ ಬಿಗ್​ ರಿಲೀಫ್: ಮೇಕೆದಾಟು ಪಾದಯಾತ್ರೆ ಚಾರ್ಜ್​ಶೀಟ್​ಗೆ ತಡೆಯಾಜ್ಞೆ - ಮೇಕೆದಾಟು ಪಾದಯಾತ್ರೆ

ಡಿಕೆಶಿ, ಸಿದ್ದು ಸೇರಿ ಕಾಂಗ್ರೆಸ್ ನಾಯಕರಿಗೆ ಬಿಗ್​ ರಿಲೀಫ್​​​​ ಸಿಕ್ಕಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ ಆರೋಪದಡಿ ಸಲ್ಲಿಕೆಯಾಗಿದ್ದ ಕೇಸ್​ಗೆ ಸಂಬಂಧಿಸಿದ ಚಾರ್ಜ್​ಶೀಟ್​ಗೆ​ ತಡೆಯಾಜ್ಞೆ ನೀಡಿ, ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಡಿಕೆಶಿ, ಸಿದ್ದು
ಡಿಕೆಶಿ, ಸಿದ್ದು

By

Published : Jun 29, 2022, 6:46 AM IST

ಬೆಂಗಳೂರು: ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿದ್ದ ಚಾರ್ಜ್ ಶೀಟ್​ಗೆ ತಡೆಯಾಜ್ಞೆ ನೀಡಲಾಗಿದೆ.

ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಎರಡು ಹಂತಗಳಲ್ಲಿ ತಲಾ ಐದು ದಿನ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗೂ ತೆರಳಿದ್ದರು. ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿದ್ದ ಚಾರ್ಜ್ ಶೀಟ್​ಗೆ ತಡೆಯಾಜ್ಞೆ ನೀಡಿ, ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಈ ವರ್ಷ ಜನವರಿಯಲ್ಲಿ ಕಾವೇರಿ ನದಿಯ ಜಲಾನಯನ ಜಿಲ್ಲೆಗಳಾದ್ಯಂತ 10 ದಿನಗಳ ಪಾದಯಾತ್ರೆ ನಡೆಸಲಾಗಿತ್ತು. ಈ ಸಂದರ್ಭ ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆ ಆಗಲಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಕಾಂಗ್ರೆಸ್ ನಾಯಕರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಸಾಂಕ್ರಾಮಿಕ ರೋಗ ಕಾಯ್ದೆಯ ನಿಬಂಧನೆಗಳ ಅನ್ವಯ ಅಗತ್ಯ ಅಧಿಸೂಚನೆಗಳಿಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಇದರ ಹೊರತಾಗಿ, ಚಾರ್ಜ್‌ಶೀಟ್/ಪ್ರಾಸಿಕ್ಯೂಷನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಮಾರ್ಗಸೂಚಿಗಳನ್ನು ಅವಲಂಬಿಸಿದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಕಾನೂನು ಬಾಹಿರವಾಗಿದೆ. ಪಾದಯಾತ್ರೆಗೆ ರಾಜ್ಯದ ಏಜೆನ್ಸಿಗಳು ಅನುಮತಿ ನೀಡಿವೆ ಎಂದು ತೋರಿಸಲು ಸಾಕಷ್ಟು ವಸ್ತುಗಳಿವೆ ಎಂದು ವಾದಿಸಲಾಯಿತು. ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಚಾರ್ಜ್ ಶೀಟ್​ಗೆ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ:ಜುಲೈ 4ಕ್ಕೆ ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ನಟ ಚಿರಂಜೀವಿಗೆ ಪ್ರತ್ಯೇಕ ಆಹ್ವಾನ

ABOUT THE AUTHOR

...view details