ಕರ್ನಾಟಕ

karnataka

ETV Bharat / city

ಕರ್ನಾಟಕದಲ್ಲಿ ಇಂಧನ‌ ದರ ಕಡಿತಗೊಳಿಸಿ ಅಧಿಸೂಚನೆ... ಹೀಗಿರಲಿದೆ ನೂತನ ದರ! - ಪೆಟ್ರೋಲ್ ಡೀಸೆಲ್ ದರ ಕಡಿತ

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ 10 ರೂ. ಹಾಗೂ 5 ರೂ.ಗೆ ಇಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.

petrol
petrol

By

Published : Nov 4, 2021, 5:34 PM IST

Updated : Nov 4, 2021, 9:45 PM IST

ಬೆಂಗಳೂರು:ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 7 ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರ ಇಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಇಂಧನ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ರೂ. ಹಾಗೂ 5 ರೂ.ಗೆ ಇಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದರು. ಆ ಮೂಲಕ ದೇಶದ ಮೊದಲ ರಾಜ್ಯವಾಗಿ ಇಂಧನ ದರ ಇಳಿಸುವ ನಿರ್ಧಾರ ಮಾಡಿದರು.

ಕರ್ನಾಟಕದಲ್ಲಿ ಇಂಧನ‌ ದರ ಕಡಿತ : ಇಂದು ಅಧಿಸೂಚನೆ ಹೊರಡಿಸಿದ ಸರ್ಕಾರ

ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 35 ರಿಂದ ಶೇ. 25.9 ಕ್ಕೆ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ.24 ರಿಂದ ಶೇ. 14.34 ಕ್ಕೆ ಇಳಿಸಿದೆ. ಇದರಿಂದ ನವೆಂಬರ್ 3 ರಂದು ಇದ್ದ ಪೆಟ್ರೋಲ್ ಮಾರಾಟ ದರವು ₹113.93 ರಿಂದ ₹100.63 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ₹ 13.30 ರೂ. ಆಗಲಿದೆ. ಹಾಗೂ ನಿನ್ನೆ ಇದ್ದ ಡೀಸೆಲ್‌ ಮಾರಾಟ ದರವು ₹ 104.50 ರಿಂದ ₹85.03 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ₹ 19.47 ಆಗಲಿದೆ.

ಕರ್ನಾಟಕದಲ್ಲಿ ಇಂಧನ‌ ದರ ಕಡಿತ: ಇಂದು ಅಧಿಸೂಚನೆ ಹೊರಡಿಸಿದ ಸರ್ಕಾರ

(ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ತೈಲದ ಮೇಲೆ ತೆರಿಗೆ ಕಡಿತ.. ಯಾವ ರಾಜ್ಯದಲ್ಲಿ ಎಷ್ಟು ಇಳಿಕೆ?)

Last Updated : Nov 4, 2021, 9:45 PM IST

ABOUT THE AUTHOR

...view details