ಬೆಂಗಳೂರು: ಎಸ್ಡಿಪಿಐ ಸಂಘಟನೆ ನಿಷೇಧದ ಕೂಗು ಸದ್ಯ ಜೋರಾಗಿ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ಎಸ್ಡಿಪಿಐ ಸಂಘಟನೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ. ಅಷ್ಟಕ್ಕೂ ಕಳೆದ ಎಂಟು ವರ್ಷಗಳಲ್ಲಿ ಎಸ್ಡಿಪಿಐ ಭಾಗಿಯಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಸರ್ಕಾರ, ಸಾಕ್ಷ್ಯ ಸಮೇತ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ.
ಸಂಘಟನೆ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ
ಎಸ್ಡಿಪಿಐ ಸಂಘಟನೆ ನಿಷೇಧ ಸದ್ಯ ರಾಜ್ಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿರುವ ವಿಚಾರ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಬಳಿಕ ಬಿಜೆಪಿ ಸರ್ಕಾರ ಈ ಬಾರಿ ಎಸ್ಡಿಪಿಐ ಸಂಘಟನೆ ನಿಷೇಧ ಮಾಡಲು ಮುಂದಾಗಿದೆ. ಇದಕ್ಕಾಗಿ ಎಸ್ಡಿಪಿಐ ವಿರುದ್ಧ ಈವರೆಗೆ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ, ಸಂಘಟನೆ ಬ್ಯಾನ್ಗೆ ಶಿಫಾರಸು ಮಾಡಲು ನಿರ್ಧರಿಸಿದೆ.
ಸಂಘಟನೆ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ
ಈ ಬಾರಿ ರಾಜ್ಯ ಗೃಹ ಇಲಾಖೆ ಸಾಕ್ಷಿ ಸಮೇತವಾಗಿ ಗೃಹ ಇಲಾಖೆಗೆ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ. ಎಸ್ಡಿಪಿಐ, ಪಿಎಫ್ಐ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸ್ವರೂಪ, ಪ್ರಕರಣಗಳ ತನಿಖೆ, ಪ್ರಕರಣಗಳಲ್ಲಿ ಸಂಘಟನೆಯ ಪಾತ್ರ, ಕೋರ್ಟ್ಗೆ ಸಲ್ಲಿಕೆಯಾಗಿರುವ ಆರೋಪಪಟ್ಟಿ ಸೇರಿ ಸಂಪೂರ್ಣ ಸವಿವರವಾದ ವರದಿಯನ್ನು ಕಡತಗಳ ಸಮೇತವಾಗಿ ಕಳುಹಿಸಿ ಕೊಡಲು ತೀರ್ಮಾನಿಸಿದೆ. ಬಿಜೆಪಿ ಸರ್ಕಾರ ಹೇಳುವಂತೆ ಎಸ್ಡಿಪಿಐ ಮತ್ತು ಅದರ ಮೂಲ ಸಂಘಟನೆ ಪಿಎಫ್ಐ ಸದಸ್ಯರ ವಿರುದ್ಧ 2008ರಿಂದೀಚೆಗೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಸಂಘಟನೆ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ
ಸಂಘಟನೆಯ ವಿರುದ್ಧದ ಕ್ರೈಂ ಡೈರಿ:
- 2008- ವಸಂತಕುಮಾರ್ ಪಿಳ್ಳೈ, ಹುಣಸೂರು
- 2009- ಮೈಸೂರು ಉದಯಗಿರಿಯ ಸೂರ್ಯ ನಾರಾಯಣ ದೇವಸ್ಥಾನದ ಮುಂದೆ ಎಳನೀರು ವ್ಯಾಪಾರಿ ವೆಂಕಟೇಶ್ ಎಂಬವನ ಹತ್ಯೆ
- 2009- ಆನಂದ ಪೈ ಮತ್ತು ರಮೇಶ್ ಎಂಬ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಹತ್ಯೆ ಪ್ರಕರಣ
- 2009- ಮೈಸೂರು ಅಶೋಕ ರಸ್ತೆಯಲ್ಲಿ ಹರೀಶ್ ಎಂಬವನ ಹತ್ಯೆ
- 2009- ಶಶಿಕುಮಾರ್ ಎಂಬ ಸವಿತಾ ಸಮಾಜದ ಯುವಕನ ಹತ್ಯೆ
- 2009- ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾದ ಗಿರಿಧರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ
- 2011- ಹುಣಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕೊಲೆ
- 2013- ಮಂಗಳೂರಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ
- 2015- ಶಿವಮೊಗ್ಗದಲ್ಲಿ ವಿಶ್ವನಾಥ್ ಎಂಬ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ
- 2015- ಮೂಡಬಿದಿರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಎಂಬಾತನ ಹತ್ಯೆ
- 2016- ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ರಾಜು ಎಂಬ ಹಿಂದೂಪರ ಕಾರ್ಯಕರ್ತನ ಹತ್ಯೆ
- 2016- ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಕುಟ್ಟಪ್ಪ ಎಂಬವರ ಹತ್ಯೆ
- 2016- ಕುಶಾಲನಗರದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ
- 2016- ಬೆಂಗಳೂರಿನ ಶಿವಾಜಿನಗರದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ
- 2019- ಕಲಾಸಿಪಾಳ್ಯದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ವರುಣ್ ಮೇಲೆ ಹಲ್ಲೆ
- 2020- ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸಂಚು
- 2020- ಸಿಎಎ ವಿರುದ್ಧದ ಮಂಗಳೂರು ಗಲಭೆ
- 2020- ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ