ಬೆಂಗಳೂರು:ಕೆಲವು ಷರತ್ತುಗಳೊಂದಿಗೆ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿಸಿದೆ. ಈ ಬಗ್ಗೆ ಅಧಿಕೃತವಾಗಿ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.
ಕೋವಿಡ್ ಮೂರನೇ ಅಲೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಅವರ ಸಲಹೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ವಿಧಿಸಿದ ನಿಯಮಗಳು:
1. ಪರಿಸರಸ್ನೇಹಿ ಗಣಪತಿ ಕೂರಿಸಬೇಕು.
2. ನಗರ ಪ್ರದೇಶದಲ್ಲಿ ವಾರ್ಡ್ಗೆ 1 ಮಾತ್ರ ಗಣಪತಿ ಪ್ರತಿಷ್ಠಾಪನೆ ಮಾಡಬೇಕು.
3. ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ.
4. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತಿಲ್ಲ.
5. ಮೆರವಣಿಗೆ, ಡಿಜೆಗೆ ಕಡಿವಾಣ
6. ಶಾಲಾ- ಕಾಲೇಜುಗಳಲ್ಲಿ ಗಣಪತಿ ಕುರಿಸಲು ಈ ಬಾರಿ ಅವಕಾಶ ಇಲ್ಲ.
7. ಗರಿಷ್ಠ 5 ದಿನದೊಳಗೆ ಗಣೇಶ ಮೂರ್ತಿ ನಿಮಜ್ಜನ ಮಾಡಬೇಕು.
8. ಈ ಬಾರಿ ಗಣೇಶ ನಿಮಜ್ಜನಕ್ಕೆ ಸಾರ್ವಜನಿಕವಾಗಿ ಅವಕಾಶ ನೀಡಲಾಗಿದೆ.
9. ಹಳ್ಳಿಗಳಲ್ಲಿ ಕೆರೆಗಳಲ್ಲಿ ನಿಮಜ್ಜನ ಮಾಡಬೇಕು.
10.ಪೊಲೀಸ್ ಅಧಿಕಾರಿಗಳ ಅನುಮತಿ ಪಡೆದು ಗಣೇಶೋತ್ಸವ ಮಾಡಬೇಕು.
11. ನಿಮಜ್ಜನ ವೇಳೆ ಈಜು ತಜ್ಞರು ಇರಲೇಬೇಕು.
12. ರಾತ್ರಿ 9 ಗಂಟೆಯ ಮೇಲೆ ನಿಮಜ್ಜನ ಮಾಡುವಂತಿಲ್ಲ.
13. ಅಪಾರ್ಟ್ಮೆಂಟ್ನಲ್ಲಿ ಗಣೇಶ ಕೂರಿಸಬಹುದು. ಆದ್ರೆ 20 ಜನರು ಮಾತ್ರ ಸೇರಬೇಕು.
14. 50 × 50 ಜಾಗದಲ್ಲಿ ಪೆಂಡಲ್ ಹಾಕಲು ಅವಕಾಶ. ಗಣೇಶ ನಿಮಜ್ಜನ ಮಾಡುವಾಗ ಇಂತಿಷ್ಟು ಜನರಿಗೆ ಮಾತ್ರ ಅವಕಾಶ.
15. ಗಡಿಜಿಲ್ಲೆಯ ಭಾಗದಲ್ಲಿ ಕೋವಿಡ್ ಪ್ರಮಾಣ ಶೇ.2 ಕ್ಕಿಂತ ಕಡಿಮೆ ಇರಬೇಕು. ಇಂತಹ ಕಡೆ ಗಣೇಶೋತ್ಸವಕ್ಕೆ ಅನುಮತಿ.
16.ಆನ್ ಲೈನ್ ಪೂಜಾ ವ್ಯವಸ್ಥೆ ಮಾಡಿಕೊಳ್ಳಬಹುದು
17. ಸಾರ್ವಜನಿಕ ಗಣಪತಿ ಹಬ್ಬ ಮಾಡುವ ಸ್ಥಳದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮಾಡಬೇಕು.
ಹಳ್ಳಿಗಳಲ್ಲಿ ಸ್ಥಳೀಯಾಡಳಿತದ ನಿರ್ಧಾರ
ಹಳ್ಳಿಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಬಗ್ಗೆ ಸ್ಥಳೀಯ ಆಡಳಿತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಪೊಲೀಸರ ಅನುಮತಿ ಕಡ್ಡಾಯ:
ವಾರ್ಡ್ಗೆ ಒಂದೆ ಗಣಪತಿ ಎಂದರೆ ಗೊಂದಲವಾಗುವುದು ಸಹಜ, ಈ ವಿಚಾರ ಕುರಿತು ಸ್ಥಳೀಯ ಪೊಲೀಸ್ ಠಾಣೆ ಹಾಗೂ ಶಾಸಕರು ಗಣೇಶ ಸಮಿತಿಗಳನ್ನು ಕರೆಸಿ ಮಾತುಕತೆ ನಡೆಸಿ ನಂತರ ಅನುಮತಿ ಕೊಡಲಿದ್ದಾರೆ. ಕಳೆ ದ ಬಾರಿಯೂ ಒಂದೇ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿತ್ತು. ಈ ಬಾರಿಯೂ ಅದನ್ನೇ ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಅವಕಾಶ ಕುರಿತು ಸಭೆ:
ಗಣೇಶ ಉತ್ಸವ ಆಚರಣೆಗೆ ಯಾವ ರೀತಿ ಅವಕಾಶ ಕಲ್ಪಿಸಬೇಕು, ಯಾರಿಗೆ ಅವಕಾಶ ಕೊಡಬೇಕು, ಏನೆಲ್ಲಾ ಷರತ್ತುಗಳನ್ನು ಹಾಕಬೇಕು ಎನ್ನುವ ಕುರಿತು ಕಾರ್ಪೋರೇಷನ್ನಲ್ಲಿ ನಾಳೆ ಸಭೆ ನಡೆಸುತ್ತೇನೆ. ವಾರ್ಡ್ಗಳಲ್ಲಿ ಒಂದೇ ಗಣೇಶ ಕೂರಿಸಲು ಏನೆಲ್ಲಾ ಮಾಡಬಹುದು ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎಂದರು.