ಬೆಂಗಳೂರು: ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿಸಿದೆ. ಬಿಬಿಎಂಪಿ (ಹಣಕಾಸು) ವಿಶೇಷ ಆಯುಕ್ತರಾಗಿದ್ದ ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿಯೂ, ಬೆಸ್ಕಾಂನ ಎಂಡಿಯಾಗಿದ್ದ ರಾಜೇಂದ್ರ ಚೋಳನ್ರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿಯಾಗಿಯೂ ಹಾಗು ಬೆಸ್ಕಾಂ ಎಂಡಿಯಾಗಿ ಮಹಾಂತೇಶ್ ಬೀಳಗಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
7 ಐಎಎಸ್ ಅಧಿಕಾರಿಗಳ ವರ್ಗಾವಣೆ: ಮಹಾಂತೇಶ್ ಬೀಳಗಿಗೆ ಬೆಸ್ಕಾಂ ಹೊಣೆ - ಕರ್ನಾಟಕ ಸರ್ಕಾರದ ಸುದ್ದಿ
ರಾಜ್ಯ ಸರ್ಕಾರ ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ವರ್ಗಾವಣೆ
ಇದನ್ನೂ ಓದಿ:ಎಸಿಬಿ ವಿರುದ್ಧದ ಹೈಕೋರ್ಟ್ ನಿರ್ದೇಶನಗಳಿಗೆ ಸುಪ್ರೀಂ ತಡೆ
ಸುಂದರೇಶ್ ಬಾಬು ಕೊಪ್ಪಳ ಡಿಸಿಯಾಗಿದ್ದಾರೆ. ಬೆಂಗಳೂರು ನಗರ ಡಿಸಿಯಾಗಿ ಶ್ರೀನಿವಾಸ್.ಕೆ ನಿಯೋಜನೆಗೊಂಡಿದ್ದಾರೆ. ನಾಗರಾಜ್ ಎನ್.ಎಂ ಚಿಕ್ಕಬಳ್ಳಾಪುರದ ಡಿಸಿಯಾಗಿಯೂ, ರಾಹುಲ್ ರತ್ನಂ ಪಾಂಡೆ ಅವರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹಾಗೂ ಭೂ ಸ್ವಾಧೀನದ ಜನರಲ್ ಮ್ಯಾನೇಜರ್ ಆಗಿ ಸರ್ಕಾರ ವರ್ಗಾಯಿಸಿದೆ.
Last Updated : Jul 19, 2022, 6:54 AM IST