ಕರ್ನಾಟಕ

karnataka

ETV Bharat / city

ರಾಜ್ಯದ ಶೇ 85ಕ್ಕೂ ಹೆಚ್ಚು ಕೋವಿಡ್‌ ಕೇಸ್ ಬೆಂಗಳೂರಲ್ಲಿ ಪತ್ತೆ: ಶೇ 7.5ಕ್ಕೇರಿದ ಪಾಸಿಟಿವಿಟಿ ದರ

ಬೆಂಗಳೂರಿನಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಇಂದು 1,27,194 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.

karnataka
ಕೊರೊನಾ

By

Published : Jan 6, 2022, 8:11 PM IST

Updated : Jan 6, 2022, 9:07 PM IST

ಬೆಂಗಳೂರು: ಕೊರೊನಾ ನಿರ್ಬಂಧಗಳಿಗೆ ಪರ- ವಿರೋಧದ ಮಧ್ಯೆಯೇ ರಾಜ್ಯದಲ್ಲಿ ಇಂದು 5031 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 4324 ಕೇಸ್​ಗಳು ರಾಜಧಾನಿ ಬೆಂಗಳೂರಿನಲ್ಲೇ ದಾಖಲಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ 7.5 ರಷ್ಟು ಹೆಚ್ಚಿದೆ.

ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇರುವ ಕೊರೊನಾ ಪ್ರಕರಣಗಳು ನಿನ್ನೆ 4 ಸಾವಿರದಷ್ಟಿದ್ದರೆ ಇಂದು ಏಕಾಏಕಿ 5 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ 3.5 ರಷ್ಟಿದೆ. ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ರೂಪಾಂತರಿ ಒಮಿಕ್ರಾನ್​ ಕೇಸ್​ ಇಂದು ದಾಖಲಾಗಿಲ್ಲ.

ಇದಲ್ಲದೇ ಬೆಂಗಳೂರಿನಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಇಂದು 1,27,194 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ:ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್‌ ಸೋಂಕು

Last Updated : Jan 6, 2022, 9:07 PM IST

ABOUT THE AUTHOR

...view details