ಬೆಂಗಳೂರು: ಕರ್ನಾಟಕದಲ್ಲಿಂದು 39,510 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 20,13,193ಕ್ಕೆ ಏರಿಕೆ ಆಗಿದೆ.
ಕರ್ನಾಟಕದಲ್ಲಿ ನಿಲ್ಲದ ಕೊರೊನಾ ರಣಕೇಕೆ: 20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ.. ಇಂದು 480 ಜನ ಬಲಿ - ಕರ್ನಾಟಕದಲ್ಲಿ 20 ಲಕ್ಷ ಕೊರೊನಾ
ರಾಜ್ಯದಲ್ಲಿಂದು ಮತ್ತೆ 39 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 480 ಜನ ಸೋಂಕಿಗೆ ತುತ್ತಾಗಿದ್ದಾರೆ.
ಇಂದು 22,584 ಮಂದಿ ಗುಣಮುಖರಾಗಿದ್ದು, ಈವರೆಗೆ 14,05,869 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5,87,452ಕ್ಕೆ ಏರಿವೆ. ಸೋಂಕಿತ ಪ್ರಕರಣಗಳ ಶೇಕಡವಾರು 33.99 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 1.21 ರಷ್ಟು ಇದೆ.
ಕೋವಿಡ್ಗೆ 480 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 19,852 ಕ್ಕೆ ಏರಿದೆ. ಇನ್ನು ಇಂದು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ 11,579 ಮಂದಿಗೆ ಹಾಗೂ 1,04,659 ಜನರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ.
ರಾಜ್ಯದಲ್ಲಿ ಡಬಲ್ ಮ್ಯುಟೇಷನ್ ವೈರಸ್ ಕಂಟಕ
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ ಇದೀಗ ಡಬಲ್ ಮ್ಯುಟೇಷನ್ ಕಂಟಕ ಎದುರಾಗಿದೆ. ಕರ್ನಾಟಕದಲ್ಲೂ ಕಾಣಿಸಿಕೊಂಡಿರುವ B.1.617 ಮ್ಯುಟೇಟ್ ವೈರಸ್, ಇದೀಗ 148 ಜನರಲ್ಲಿ ಕಾಣಿಸಿಕೊಂಡಿದೆ. ಬಹುಬೇಗವಾಗಿ ಹರಡುವ ಈ ಡಬಲ್ ಮ್ಯೂಟೇಷನ್, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಇನ್ನು ಸೌತ್ ಆಫ್ರಿಕಾ ರೂಪಾಂತರಿ ವೈರಸ್ 6 ಜನರಿಗೆ ಹಾಗೂ ಯುಕೆ ರೂಪಾಂತರಿ ವೈರಸ್ 86 ಜನರಲ್ಲಿ ಕಾಣಿಸಿಕೊಂಡಿದೆ.