ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 1,488 ಜನರಲ್ಲಿ ಹೊಸ ಕೋವಿಡ್: 8 ಮಂದಿ ಬಲಿ - ಕರ್ನಾಟಕ ಕೋವಿಡ್ ಅಪ್​ಡೇಟ್

ಕರ್ನಾಟಕದಲ್ಲಿ ಕೊರೊನಾ ಮತ್ತೆ ಹೆಚ್ಚುತ್ತಿದೆ. ಇಂದು 1488 ಜನರಲ್ಲಿ ಹೊಸ ಕೊರೊನಾ ದೃಢಪಟ್ಟಿದೆ.

ಕೊರೊನಾ
ಕೊರೊನಾ

By

Published : Mar 18, 2021, 10:34 PM IST

ಬೆಂಗಳೂರು: ರಾಜ್ಯದಲ್ಲಿಂದು 1,488 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 8 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ಸೋಂಕಿತರ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇಂದು 341 ಮಂದಿ ಗುಣಮುಖರಾಗಿದ್ದಾರೆ. 11,359ಕ್ಕೆ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ.

ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 9,65,102 ತಲುಪಿದೆ. ಮೃತಪಟ್ಟವರ ಸಂಖ್ಯೆ 12,415 ಕ್ಕೇರಿದೆ. ಐಸಿಯುನಲ್ಲಿ 131 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ 925 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.59 ಇದ್ದು, ಮೃತಪಟ್ಟವರ ಸಂಖ್ಯೆ ಶೇ.0.53 ಇದೆ.

ABOUT THE AUTHOR

...view details