ಬೆಂಗಳೂರು:ರಾಜ್ಯದಲ್ಲಿಂದು 383 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,48,849ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 383 ಮಂದಿಗೆ ಕೊರೊನಾ ದೃಢ: ನಾಲ್ವರು ಬಲಿ - ಕೋವಿಡ್19 ವರದಿ
ಬೆಂಗಳೂರಿನಲ್ಲಿಂದು 240 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,04,183ಕ್ಕೆ ಏರಿಕೆ ಆಗಿದೆ. ಇಂದು 240 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 3,95,344 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು 4 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,303ಕ್ಕೆ ಏರಿದೆ. ಇಂದು 378 ಮಂದಿ ಗುಣಮುಖರಾಗಿದ್ದು, ಇಲ್ಲಿವರೆಗೆ ಒಟ್ಟು 9,30,465 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,062 ಇದ್ದು, 122 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ನಿಲ್ದಾಣದಿಂದ 636 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೆ ಯುಕೆಯಿಂದ ಬಂದ 63 ಜನರಿಗೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಕೊರೊನಾ ದೃಢಪಟ್ಟಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.
ಬೆಂಗಳೂರಿನಲ್ಲಿಂದು 240 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,04,183ಕ್ಕೆ ಏರಿಕೆ ಆಗಿದೆ. ಇಂದು 240 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 3,95,344 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 4380 ಸಕ್ರಿಯ ಪ್ರಕರಣಗಳು ಇದ್ದು, ನಾಲ್ವರು ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ ಒಟ್ಟು 4,458 ಜನರು ಸೋಂಕಿಗೆ ಬಲಿಯಾಗಿದ್ದಾರೆ.