ಬೆಂಗಳೂರು: ರಾಜ್ಯದಲ್ಲಿಂದು 934 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,60,272 ಕ್ಕೆ ಏರಿಕೆ ಆಗಿದೆ. ಇಂದು ಮೂವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,390 ಕ್ಕೆ ಏರಿದೆ.
ರಾಜ್ಯದಲ್ಲಿಂದು 934 ಮಂದಿಗೆ ಸೋಂಕು: ಮೂವರು ಕೋವಿಡ್ಗೆ ಬಲಿ - ಇಂದಿನ ಕೊರೊನಾ ವರದಿ
ಭಾನುವಾರ 609 ಮಂದಿ ಗುಣಮುಖರಾಗಿದ್ದು 9,39,499 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 8,364 ಇದ್ದು 125 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
609 ಮಂದಿ ಗುಣಮುಖರಾಗಿದ್ದು 9,39,499 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 8,364 ಇದ್ದು 125 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡವಾರು 1.27 ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ.0.32 ರಷ್ಟು ಇದೆ.
ಯುಕೆಯಿಂದ ಇಂದು 257 ಪ್ರಯಾಣಿಕರು ಬಂದಿದ್ದು, ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಜನರಿಗೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 29 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಮೂವರಲ್ಲಿ ಕಾಣಿಸಿಕೊಂಡಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.