ಬೆಂಗಳೂರು: ರಾಜ್ಯದಲ್ಲಿಂದು 213 ಜನರಿಗೆ ಕೋವಿಡ್ ಪಾಸಿಟಿವ್ (Karnataka Covid report) ದೃಢಪಟ್ಟಿದ್ದು, ಐವರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
COVID Update: ರಾಜ್ಯದಲ್ಲಿಂದು 213 ಜನರಲ್ಲಿ ಸೋಂಕು.. 5 ಮಂದಿ ಸಾವು - ಕರ್ನಾಟಕದಲ್ಲಿ ಹೊಸ ಕೋವಿಡ್ ಕೇಸ್
ಕರ್ನಾಟಕದ ಇಂದಿನ ಕೊರೊನಾ ವರದಿ (Karnataka Covid report)..
covid
ಶನಿವಾರ 370 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,48,053 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,93,352 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 38,174 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಲ್ಲಿ 134 ಮಂದಿಗೆ ಕೋವಿಡ್ ಸೋಂಕು (Bengaluru Corona cases) ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 5,845 ಕೋವಿಡ್ ಸಕ್ರಿಯ ಪ್ರಕರಣಗಳಿವೆ.