ಬೆಂಗಳೂರು: ರಾಜ್ಯದಲ್ಲಿಂದು 932 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,61,204 ಕ್ಕೆ ಏರಿಕೆ ಆಗಿದೆ. ಇಂದು 7 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯು 12,397 ಕ್ಕೆ ಏರಿದೆ.
ರಾಜ್ಯದಲ್ಲಿಂದು 932 ಮಂದಿಗೆ ಕೊರೊನಾ: 7 ಜನ ಬಲಿ - ಕೋವಿಡ್ ಅಪ್ಡೇಟ್
ರಾಜ್ಯದಲ್ಲಿ ಇಂದು 429 ಮಂದಿ ಗುಣಮುಖರಾಗಿದ್ದು, 9,39,928 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 8,860 ಇದ್ದು, 125 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

429 ಮಂದಿ ಗುಣಮುಖರಾಗಿದ್ದು, 9,39,928 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 8,860 ಇದ್ದು, 125 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡಾವಾರು 1.49ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ.0.75ರಷ್ಟು ಇದೆ.
ಯುಕೆಯಿಂದ ಇಂದು 237 ಪ್ರಯಾಣಿಕರು ಬಂದಿದ್ದು, ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 29 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಮೂವರಲ್ಲಿ ಕಾಣಿಸಿಕೊಂಡು, ಅವರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.