ಬೆಂಗಳೂರು : ರಾಜ್ಯದಲ್ಲಿಂದು 66,596 ಮಂದಿಗೆ ಕೋವಿಡ್ ಪರೀಕ್ಷೆ (Karnataka COVID) ನಡೆಸಲಾಗಿದ್ದು, ಅದರಲ್ಲಿ 171 ಜನರಿಗೆ ಸೋಂಕು ದೃಢಪಟ್ಟಿದೆ (Corona Positive). ಈ ಮೂಲಕ ಸೋಂಕಿತರ ಸಂಖ್ಯೆ 29,92,021ಕ್ಕೆ ಏರಿದೆ.
COVID-19 : ರಾಜ್ಯದಲ್ಲಿ 171 ಹೊಸ ಕೇಸ್ ಪತ್ತೆ.. ಮೈಸೂರಲ್ಲಿ ಓರ್ವ ಕೋವಿಡ್ಗೆ ಬಲಿ.. - ಬೆಂಗಳೂರು ಕೋವಿಡ್ ಪ್ರಕರಣಗಳು
ಕರ್ನಾಟಕದ ಇಂದಿನ ಕೊರೊನಾ ವರದಿ (Karnataka COVID)..
ಇತ್ತ 255 ಮಂದಿ ಡಿಸ್ಚಾರ್ಜ್ ಆಗಿದ್ದು, 29,45,934 ಮಂದಿ ಗುಣಮುಖರಾಗಿದ್ದಾರೆ. ಮೈಸೂರಿನಲ್ಲಿ ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,146ಕ್ಕೆ ಏರಿಕೆ ಆಗಿದೆ. ಸದ್ಯ 7,912 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.25 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.0.58 ರಷ್ಟಿದೆ.
ರಾಜಧಾನಿ ಬೆಂಗಳೂರಲ್ಲಿ 118 ಮಂದಿಗೆ ಸೋಂಕು ದೃಢಪಟ್ಟಿದೆ.(Bengaluru Covid cases) ಈ ಮೂಲಕ ಸೋಂಕಿತರ ಸಂಖ್ಯೆ 12,54,093ಕ್ಕೆ ಏರಿಕೆ ಆಗಿದೆ. 144 ಜನರು ಗುಣಮುಖರಾಗಿದ್ದು, 12,31,206 ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಲ್ಲಿಂದು ಯಾವುದೇ ಮೃತಪಟ್ಟಿರುವ ವರದಿಯಾಗಿಲ್ಲ. ಸದ್ಯ ಸಾವಿನ ಸಂಖ್ಯೆ 16,312 ಇದೆ. 6574 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ಅಪ್ಡೇಟ್ಸ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01