ಬೆಂಗಳೂರು: ರಾಜ್ಯದಲ್ಲಿಂದು 6,224 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 111 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6,58,88,549 ಕ್ಕೆ ಏರಿಕೆ ಆಗಿದೆ. ಇತ್ತ ಇಂದು 76 ಮಂದಿ ಡಿಸ್ಜಾರ್ಜ್ ಆಗಿದ್ದು 39,05,920 ಮಂದಿ ಗುಣಮುಖರಾಗಿದ್ದಾರೆ.
ಇಂದು ಕೋವಿಡ್ ನಿಂದಾಗಿ ಯಾವುದೇ ರೋಗಿ ಮೃತಪಟ್ಟಿಲ್ಲ. ಒಟ್ಟು ಮೃತರ ಸಂಖ್ಯೆ 40,060 ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 1,815ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ. 0.36% ರಷ್ಟಿದ್ದರೆ. ಸಾವಿನ ಪ್ರಮಾಣ 0.00% ರಷ್ಟಿದೆ.
ವಿಮಾನ ನಿಲ್ದಾಣದಿಂದ ಇಂದು 4,365 ಮಂದಿ ಸೇರಿದಂತೆ ಇದುವರೆಗೂ 8,65,228 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ ಇಂದು ಯಾರೂ ಆಗಮಿಸಿಲ್ಲ. 23 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 103 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,83,780 ಕ್ಕೆ ಏರಿಕೆ ಆಗಿದೆ. 73 ಮಂದಿ ಇಂದು ಬಿಡುಗಡೆಯಾಗಿದ್ದು, ಇದುವರೆಗೂ 1765086 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸಾವಿನ ಸಂಖ್ಯೆ 16962ಕ್ಕೆ ಏರಿದೆ. ಇನ್ನು ಸಕ್ರಿಯ ಪ್ರಕರಣಗಳು 1,731 ಇದೆ.
ಇದನ್ನೂ ಓದಿ:ಮಾಗಡಿ ತಾಲೂಕಿನ ಪಿಎಸ್ಐ ಅಭ್ಯರ್ಥಿಯಿಂದ ₹80 ಲಕ್ಷ ಹಣ ಪಡೆದರಾ ಸಚಿವರ ಸಹೋದರ!?