ಬೆಂಗಳೂರು: ರಾಜ್ಯದಲ್ಲಿಂದು 2052 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 35 ಮಂದಿ ಸೋಂಕಿಗೆ ಬಲಿಯಾಗಿದ್ದು, 1332 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 28,41,479 ಮಂದಿ ಚೇತರಿಸಿಕೊಂಡಿದ್ದಾರೆ.
Karnataka COVID Update: 2052 ಮಂದಿಗೆ ಕೊರೊನಾ ಪಾಸಿಟಿವ್, 35 ಮಂದಿ ಬಲಿ - Karnataka COVID Report,
ರಾಜ್ಯದಲ್ಲಿ ಕೋವಿಡ್ ಹಾವು ಏಣಿ ಆಟ ಆಡುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. 2052 ಮಂದಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದರೆ, 35 ಜನ ಸೋಂಕಿತರ ಸಾವನ್ನಪ್ಪಿದ್ದಾರೆ. ರಾಜ್ಯದ ಸೋಂಕಿನ ಪ್ರಕರಣಗಳ ಪ್ರಮಾಣ 1.37% ರಷ್ಟಿದೆ.
ಕರ್ನಾಟಕ ಕೋವಿಡ್ ವರದಿ
ರಾಜ್ಯದಲ್ಲಿ 23,253 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 2,90,12,47ಕ್ಕೆ ಏರಿಕೆಯಾಗಿದ್ದು, ಈವರೆಗೆ 36,491 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರದಲ್ಲಿಂದು 506 ಜನ ಸೋಂಕಿಗೆ ಒಳಗಾಗಿದ್ದು, 9 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಪ್ರಮಾಣ 1.37% ಇದ್ದು, ಮೃತಪಟ್ಟವರ ಪ್ರಮಾಣ 1.70% ಇದೆ.