ಬೆಂಗಳೂರು:ಕೊರೊನಾ ನಿಗ್ರಹಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಬಳಿಕ ಸತತ ಮೂರನೇ ದಿನವೂ ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಂದು 80,409 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 1,290 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು 232 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 29,61,122 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಐವರು ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 38,251 ಏರಿಕೆ ಆಗಿದೆ. ಇತ್ತ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಸದ್ಯ 11,345 ರಷ್ಟಿದೆ.
ಪಾಸಿಟಿವ್ ಪ್ರಮಾಣ 1.60 ರಷ್ಟಿದ್ದರೆ, ಸಾವಿನ ಪ್ರಮಾಣ 0.38 ರಷ್ಟಿದೆ. ವಿಮಾನ ನಿಲ್ದಾಣದಿಂದ 3,780 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶದಿಂದ ಸುಮಾರು 950 ಜನರು ಆಗಮಿಸಿದ್ದಾರೆ.
ರಾಜಧಾನಿಯಲ್ಲೇ ಸಾವಿರ ಸೋಂಕಿತರು
ರಾಜಧಾನಿ ಬೆಂಗಳೂರು ರೆಡ್ಝೋನ್ನಲ್ಲಿ ಇರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ. ಈ ಮಧ್ಯೆ ಇನ್ನಷ್ಟು ಆತಂಕ ಹೆಚ್ಚಿಸುವಂತೆ ಎರಡನೇ ಅಲೆಯ ಭೀಕರತೆ ಇಳಿಕೆಯಾದ ನಂತರ ಇದೇ ಮೊದಲು ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿಂದು 1041 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,66,392 ಕ್ಕೆ ಏರಿದೆ. 134 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ 12,40,408 ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,408 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 9575 ರಷ್ಟಿದೆ.
ರೂಪಾಂತರಿ ಅಪ್‌ಡೇಟ್ಸ್
- ಅಲ್ಪಾ- 156
- ಬೀಟಾ-08
- ಡೆಲ್ಟಾ- 2537
- ಡೆಲ್ಟಾ ಸಬ್ ಲೈನ್ ಏಜ್- 949
- ಕಪ್ಪಾ-160
- ಈಟಾ-01
- ಒಮಿಕ್ರಾನ್- 66
ರೂಪಾಂತರಿ ಸೋಂಕಿನಲ್ಲೂ ಏರಿಕೆ ಕಂಡಿದ್ದು ಅಲ್ಪಾ ಒಬ್ಬರಲ್ಲಿ ಕಾಣಿಸಿದ್ದು, ಈ ಪ್ರಕರಣಗಳ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. ಇತ್ತ ಡೆಲ್ಟಾ ಸಬ್ ಲೈನ್ ಏಜ್ 401 ಮಂದಿಗೆ ಪತ್ತೆಯಾಗಿದ್ದು, 1350 ಏರಿಕೆ ಆಗಿದೆ. ಇತ್ತ ಒಮಿಕ್ರಾನ್ 66ರಿಂದ 77 ಕ್ಕೆ ಜಿಗಿತ ಕಂಡಿದೆ.
ಇದನ್ನೂ ಓದಿ:ಒಮಿಕ್ರಾನ್ ಹೆಚ್ಚಳ: ಜಾರ್ಖಂಡ್‌ನಲ್ಲಿ ಜ.15ರವರೆಗೆ ಮಿನಿ ಲಾಕ್‌ಡೌನ್ ಜಾರಿ