ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 104 ಮಂದಿಗೆ ಸೋಂಕು ದೃಢ; ಒಬ್ಬ ಸೋಂಕಿತ ಬಲಿ

Karnataka COVID update.. ರಾಜ್ಯದಲ್ಲಿಂದು 104 ಮಂದಿಗೆ ಸೋಂಕು ತಗುಲಿದ್ದು, ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಸರ್ಕಾರ ಕೊರೊನಾ ಪರೀಕ್ಷೆ ಹೆಚ್ಚು ಮಾಡುವ ಬಗ್ಗೆ ಹೇಳಿದ್ದರೂ ರಾಜ್ಯಾದ್ಯಂತ 10,000 ಮಂದಿಗೆ ಮಾತ್ರ ಪರೀಕ್ಷೆ ನಡೆಯುತ್ತಿದೆ.

Karnataka covid bulletin
ಕೋವಿಡ್​ ಸೋಂಕಿತರ ಸಂಖ್ಯೆ

By

Published : May 1, 2022, 8:18 PM IST

ಬೆಂಗಳೂರು:ರಾಜ್ಯದಲ್ಲಿಂದು 10,566 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಈ ಪೈಕಿ 104 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,726 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 0.98% ಕ್ಕೆ ಏರಿಕೆ ಕಂಡಿದೆ.

108 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 39,05,844 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು ಒಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,060ಕ್ಕೆ ಏರಿಕೆ ಆಗಿದೆ. ಈ ಮೂಲಕ ಡೆತ್ ರೇಟು 0.36 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 1780 ರಷ್ಟಿದೆ.

ವಿಮಾನ ನಿಲ್ದಾಣದಿಂದ 4536 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 93 ಮಂದಿಗೆ ಸೋಂಕು ತಗುಲಿದ್ದು 17,83,677 ಕ್ಕೆ ಏರಿಕೆ ಆಗಿದೆ. 107 ಮಂದಿ ಡಿಸ್ಚಾರ್ಜ್ ಆಗಿದ್ದು, ಈತನಕ 17,65,013 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,701 ರಷ್ಟಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್

  • ಅಲ್ಪಾ- 156
  • ಬೀಟಾ-08
  • ಡೆಲ್ಟಾ ಸಬ್ ಲೈನೇಜ್- 4623
  • ಇತರೆ- 331
  • ಒಮಿಕ್ರಾನ್- 5422
  • BAI.1.529- 1005
  • BA1- 100
  • BA2- 4317

ಇದನ್ನೂ ಓದಿ:ಎಲೆಕ್ಟ್ರಿಕ್ ಬೈಕ್​ಗಳಲ್ಲಿ ಬೆಂಕಿ ಅವಘಡಗಳ ಬಗ್ಗೆ ಕೇಂದ್ರ ಸಾರಿಗೆ ಕಾರ್ಯದರ್ಶಿ ಹೇಳಿದ್ದೇನು?

ABOUT THE AUTHOR

...view details