ಬೆಂಗಳೂರು:ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ತೀವ್ರತೆ ಹೆಚ್ಚಾಗ್ತಿದ್ದು, ಕಳೆದ 22 ದಿನದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಇಂದು ಇಬ್ಬರು ಮೃತಪಟ್ಟಿದ್ದಾರೆ. 9944 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 126 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,622 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರವೂ 1.26% ಕ್ಕೆ ಏರಿಕೆ ಕಂಡಿದೆ.
76 ಸೋಂಕಿತರು ಗುಣಮುಖರಾಗಿದ್ದು ಈ ತನಕ 39,05,736 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,059ಕ್ಕೆ ಏರಿಕೆ ಆಗಿದೆ. ಈ ಮೂಲಕ ಡೆತ್ ರೇಟು 0.22 ರಷ್ಟಿದೆ. ಸಕ್ರಿಯ ಪ್ರಕರಣಗಳು 1785 ರಷ್ಟಿದೆ.
ವಿಮಾನ ನಿಲ್ದಾಣದಿಂದ 3304 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ 120 ಮಂದಿಗೆ ಸೋಂಕು ತಗುಲಿದ್ದು, 17,83,584 ಕ್ಕೆ ಏರಿಕೆ ಆಗಿದೆ. 72 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,64,906 ಏರಿಕೆ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,715 ರಷ್ಟಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
- ಅಲ್ಪಾ- 156
- ಬೀಟಾ-08
- ಡೆಲ್ಟಾ ಸಬ್ ಲೈನೇಜ್- 4623
- ಇತರೆ- 331
- ಒಮಿಕ್ರಾನ್- 5422
- BAI.1.529- 1005
- BA1- 100
- BA2- 4317
ಇದನ್ನೂ ಓದಿ:ಆ್ಯಸಿಡ್ ದಾಳಿ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆ ಬಳಿಕ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ: ಸಚಿವ ಸುಧಾಕರ್