ಬೆಂಗಳೂರು: ರಾಜ್ಯದಲ್ಲಿಂದು 1,55,101 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಇದರಲ್ಲಿ 2,984 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,49,997 ಕ್ಕೆ ಏರಿಕೆ ಕಂಡಿದೆ. ಇನ್ನು 14,337 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 27,60,881 ಜನರು ಡಿಸ್ಚಾರ್ಜ್ ಆಗಿದ್ದಾರೆ.
COVID ಬುಲೆಟಿನ್: ರಾಜ್ಯದಲ್ಲಿಂದು 2984 ಮಂದಿಗೆ ಕೊರೊನಾ, 88 ಸೋಂಕಿತರು ಬಲಿ
ರಾಜ್ಯದಲ್ಲಿ ಕೊರೊನಾ ಕೇಸ್ಗಳು ಕಡಿಮೆಯಾಗುತ್ತಿರುವುದು ಒಂದೆಡೆಯಾದ್ರೆ ಇನ್ನೊಂದೆಡೆ ಡೆಲ್ಟಾ ಸೋಂಕು ನಿಧಾನವಾಗಿ ಹರಡುತ್ತಿದೆ.
ಪಾಸಿಟಿವಿಟಿ ದರ ಶೇ.1.92 ರಷ್ಟಿದೆ. ಸದ್ಯ 53,871 ರಷ್ಟು ಸಕ್ರಿಯ ಪ್ರಕರಣಗಳಿವೆ. ಇಂದು 88 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 35,222 ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ ಮತ್ತೆ 2.94ರಷ್ಟು ಇದೆ.
ಶಾಕ್ ಕೊಟ್ಟ ಡೆಲ್ಟಾ ಸೋಂಕು:
ಭಾರತದ ರೂಪಾಂತರಿ ( Delta/B.617.2) ಡೆಲ್ಟಾ ಸೋಂಕು ಶಾಕ್ ಕೊಟ್ಟಿದ್ದು, ಬರೋಬ್ಬರಿ 725 ಜನರಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಯುಕೆಯ ರೂಪಾಂತರಿ ವೈರಸ್ ಅಲ್ಪಾ(Alpha/B.1.1.7) 140 ಜನರಲ್ಲಿ ಕಾಣಿಸಿಕೊಂಡಿದ್ದರೆ, ಇತ್ತ ಸೌತ್ ಆಫ್ರಿಕಾದ ಬೇಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಕಪ್ಪಾ (Kappa/B.1.617) 145 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಇಬ್ಬರಲ್ಲಿ ಪತ್ತೆಯಾಗಿದೆ. (ಕೊರೊನಾ ಸಂಕಷ್ಟದ ಸಮಯದಲ್ಲಿನ ಸವಾಲುಗಳ ಬಗ್ಗೆ ವೈದ್ಯರು ಹೇಳಿದ್ದೇನು?)