ಕರ್ನಾಟಕ

karnataka

ETV Bharat / city

COVID ಬುಲೆಟಿನ್: ರಾಜ್ಯದಲ್ಲಿಂದು 9,785 ಮಂದಿಗೆ ಕೋವಿಡ್... ಯಾವ ಜಿಲ್ಲೆಯಲ್ಲಿ ಎಷ್ಟು? - ಕರ್ನಾಟಕ ಕೊರೊನಾ ಅಪ್​ಡೇಟ್

ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಸಂಖ್ಯೆ ಹೆಚ್ಚಿದ್ದು, 9,785 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 144 ಸೋಂಕಿತರು ಬಲಿಯಾಗಿದ್ದಾರೆ.

coron
coron

By

Published : Jun 12, 2021, 8:27 PM IST


ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಭಾರಿ ಇಳಿಕೆಯಾಗಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲೇ ನಿನ್ನೆ ಅತಿ ಕಡಿಮೆ 8249 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಇಂದು 9,785 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 144 ಸೋಂಕಿತರು ಬಲಿಯಾಗಿದ್ದಾರೆ.

ಇಂದು 21,614 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 25,32,719 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 1,91,796 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 27,57,324 ಕ್ಕೆ ಏರಿಕೆಯಾಗಿದ್ದು, ಈವರೆಗೆ 32,788 ಸೋಂಕಿತರು ಬಲಿಯಾಗಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಂದು 2454 ಜನ ಸೋಂಕಿಗೆ ಒಳಗಾಗಿದ್ದು, 21 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 70, ಬಳ್ಳಾರಿಯಲ್ಲಿ 337 , ಬೆಳಗಾವಿ 443, ಬೆಂ.ಗ್ರಾಮಾಂತರ 242, ಬೀದರ್ 309), ಚಾಮರಾಜನಗರ 176, ಚಿಕ್ಕಬಳ್ಳಾಪುರ 273, ಚಿಕ್ಕಮಗಳೂರು 342, ಚಿತ್ರದುರ್ಗ 156, ದ.ಕನ್ನಡ 618, ದಾವಣಗೆರೆ 372 , ಧಾರವಾಡ 212, ಗದಗ 60, ಹಾಸನ 624, ಹಾವೇರಿ 65, ಕಲಬುರಗಿ 60, ಕೊಡಗು 194, ಕೋಲಾರ 193, ಕೊಪ್ಪಳ 127, ಮಂಡ್ಯ 320, ಮೈಸೂರು 482, ರಾಯಚೂರು 59, ರಾಮನಗರ 32, ಶಿವಮೊಗ್ಗ 715, ತುಮಕೂರು 440, ಉಡುಪಿ 263, ಉ.ಕನ್ನಡ 229, ವಿಜಯಪುರ 188, ಯಾದಗಿರಿಯಲ್ಲಿ 09 ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ABOUT THE AUTHOR

...view details