ಬೆಂಗಳೂರು: ಕಳೆದ ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿಂದು 10 ಸಾವಿರಕ್ಕಿಂತ ಕಡಿಮೆ ಕೋವಿಡ್ ಕೇಸ್ಗಳು ಪತ್ತೆಯಾಗಿವೆ. ಇಂದು 9,808 ಜನರಲ್ಲಿ ಸೋಂಕು ದೃಢಪಟ್ಟಿದೆ.
COVID update: ರಾಜ್ಯದಲ್ಲಿಂದು 10 ಸಾವಿರಕ್ಕಿಂತ ಕಡಿಮೆ ಕೇಸ್ಗಳು ಪತ್ತೆ, 179 ಸೋಂಕಿತರು ಸಾವು - ಕರ್ನಾಟಕ ಅನ್ಲಾಕ್
ರಾಜ್ಯದಲ್ಲಿಂದು 9808 ಮಂದಿಗೆ ಸೋಂಕು ದೃಢಪಟ್ಟಿದ್ದು, 179 ಸೋಂಕಿತರು ಕೋವಿಡ್ಗೆ ಬಲಿಯಾಗಿದ್ದಾರೆ.
ಇಂದು 1,30,224 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 9,808 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,17,289 ಕ್ಕೆ ಏರಿಕೆ ಆಗಿದೆ. 23,449 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 24,60,165 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 2,25,004 ರಷ್ಟು ಇವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 7.53% ಇಳಿಕೆಯಾಗಿದೆ. ಸಾವಿನ ಶೇಕಡವಾರು ಪ್ರಮಾಣ 1.85 % ರಷ್ಟು ಇದೆ. ಇದೇ ಮೊದಲ ಬಾರಿಗೆ ಮೃತರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಇಂದು 179 ಸೋಂಕಿತರು ಮೃತರಾಗಿದ್ದಾರೆ. ಈವರೆಗೆ ಒಟ್ಟು 32,099 ಜನ ಮೃತಪಟ್ಟಿದ್ದಾರೆ.