ಕರ್ನಾಟಕ

karnataka

ETV Bharat / city

ಮೊದಲ ಬಾರಿ ಪಾಸಿಟಿವಿಟಿ ದರದಲ್ಲಿ ಭಾರಿ ಇಳಿಕೆ:1.35 ಲಕ್ಷ ಟೆಸ್ಟ್​​ನಲ್ಲಿ 11,958 ಮಂದಿಗೆ ಮಾತ್ರ ಸೋಂಕು - ಕೊರೊನಾ ವರದಿ

ರಾಜ್ಯದಲ್ಲಿಂದು 11,958 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. 1,31,553 ಜನರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿತ್ತು.

bulletin
bulletin

By

Published : Jun 7, 2021, 7:58 PM IST


ಬೆಂಗಳೂರು: ರಾಜ್ಯದಲ್ಲಿಂದು 1,31,553 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 11,958 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,07,481 ಕ್ಕೆ ಏರಿಕೆ ಆಗಿದೆ. ಇಂದು 27,299 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 24,36,716 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳು 2,38,824 ರಷ್ಟು ಇದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಇದೇ ಮೊದಲ ಬಾರಿಗೆ ಶೇ.08 ರಷ್ಟು ಇಳಿಕೆಯಾಗಿದೆ. ಸಾವಿನ‌ ಶೇಕಡವಾರು ಪ್ರಮಾಣ ಶೇ.2.84 ರಷ್ಟು‌ ಇದೆ.‌ ಕೋವಿಡ್​​ಗೆ 340 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 31,920 ಕ್ಕೆ ಏರಿಕೆಯಾಗಿದೆ. ಇನ್ನು ಇಂಗ್ಲೆಂಡ್​ನಿಂದ 173 ಮಂದಿ ರಾಜ್ಯಕ್ಕೆ ಆಗಮಿಸಿದ್ದಾರೆ.‌

ಇಳಿಕೆಯ ಹಾದಿ ಹೀಗಿದೆ

ಜೂನ್- 1- 14,304
ಜೂನ್- 2- 16,387
ಜೂನ್- 3- 18,324
ಜೂನ್- 4- 16,068
ಜೂನ್- 5- 13,800
ಜೂನ್- 6- 12,209
ಜೂನ್ 7 - 11,958

ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾದ ಬಳಿಕ ಕ್ರಮೇಣವಾಗಿ ಕೇಸ್​ಗಳು ಕಡಿಮೆಯಾಗುತ್ತಿವೆ. 50 ಸಾವಿರದವರೆಗೆ ತಲುಪಿದ್ದ ಸಂಖ್ಯೆ ಈಗ 10 ಸಾವಿರದ ಗಡಿ ಆಸುಪಾಸಿಗೆ ಬಂದಿದೆ.

ABOUT THE AUTHOR

...view details