ಬೆಂಗಳೂರು:ರಾಜ್ಯದಲ್ಲಿಂದು 20,628 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 25,67,449 ಕ್ಕೆ ಏರಿದೆ.
ರಾಜ್ಯದಲ್ಲಿಂದು 20 ಸಾವಿರ ಮಂದಿಗೆ ಸೋಂಕು: 492 ಸೋಂಕಿತರು ಬಲಿ - ಕೋವಿಡ್ ಬುಲೆಟಿನ್
ಕರ್ನಾಟಕದಲ್ಲಿ ಇಂದು 20 ಸಾವಿರ ಜನರಲ್ಲಿ ಸೋಂಕು ದೃಢಪಟ್ಟಿದ್ದು, 492 ಜನ ಮೃತಪಟ್ಟಿದ್ದಾರೆ.
coron
ಇಂದು 42,444 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 21,89,064 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,50,066 ರಷ್ಟು ಇದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 14.95 ರಷ್ಟು ಇದೆ. ಸಾವಿನ ಶೇಕಡವಾರು ಪ್ರಮಾಣ 2.38 ರಷ್ಟು ಇದೆ.
ಇಂದು ಕೋವಿಡ್ಗೆ 492 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 28,298 ಕ್ಕೆ ಏರಿದೆ.