ಬೆಂಗಳೂರು: ರಾಜ್ಯದಲ್ಲಿಂದು ಕೂಡ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. 25,311 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 24,50,215ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 529 ಸೋಂಕಿತರು ಕೋವಿಡ್ಗೆ ಬಲಿ.. 57 ಸಾವಿರ ಮಂದಿ ಡಿಸ್ಚಾರ್ಜ್ - ಕೊರೊನಾ ಬುಲೆಟಿನ್
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇಂದು 25,311 ಮಂದಿಗೆ ಸೋಂಕು ತಗುಲಿದ್ದು, 529 ಜನ ಬಲಿಯಾಗಿದ್ದಾರೆ. 57, 333 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
COVID
ಕೋವಿಡ್ಗೆ 529 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 25,811ಕ್ಕೆ ಏರಿದೆ. 57,333 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 19,83,948 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು ನಿಧಾನಗತಿಯಲ್ಲಿ ಇಳಿಕೆಯಾಗ್ತಿದ್ದು, ಸದ್ಯ 4,40,435 ಕೇಸ್ಗಳು ಇವೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳು ಶೇಕಡವಾರು ಪ್ರಮಾಣ ಶೇ.23.28 ರಷ್ಟು, ಸಾವಿನ ಶೇಕಡವಾರು ಪ್ರಮಾಣ ಶೇ.2.09 ರಷ್ಟು ಇದೆ.