ಬೆಂಗಳೂರು:ರಾಜ್ಯದಲ್ಲಿಂದು 38,603 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 22,42,065 ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 38,603 ಮಂದಿಗೆ ಕೋವಿಡ್ ದೃಢ: 476 ಸೋಂಕಿತರು ಬಲಿ - ಕೋವಿಡ್ ಬಲೆಟಿನ್
ರಾಜ್ಯದಲ್ಲಿಂದು ಮತ್ತೆ ಕೊರೊನಾ ಸಂಖ್ಯೆ ಹೆಚ್ಚಿದೆ. ನಿನ್ನೆ 30 ಸಾವಿರ ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ ಇಂದು 38 ಸಾವಿರ ದಾಟಿದ್ದರೆ, 476 ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್
ಇಂದು 476 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 22,313 ಕ್ಕೆ ಏರಿಕೆ ಆಗಿದೆ. 34,635 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 16,16,092 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ರಾಜ್ಯದಲ್ಲಿ 6,03,639 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಸೋಂಕಿತ ಖಚಿತ ಪ್ರಕರಣಗಳ ಶೇಖಡವಾರು ಪ್ರಮಾಣ 39.70 ರಷ್ಟು ಇದ್ದರೆ, ಮೃತರ ಶೇಕಡಾವಾರು ಪ್ರಮಾಣ 1.23 ರಷ್ಟು ಇದೆ.