ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ತಗ್ಗಿದ ಕೊರೊನಾ: ಇಂದು 31 ಸಾವಿರ ಮಂದಿಗೆ ಸೋಂಕು, 403 ಜನರ ಸಾವು - ಕೋವಿಡ್ ಅಪ್​ಡೇಟ್

ಕರ್ನಾಟಕದಲ್ಲಿಂದು ಕೊರೊನಾ ಸಂಖ್ಯೆ ಇಳಿಮುಖವಾಗಿದೆ. ಲಾಕ್​ಡೌನ್ ಬಳಿಕವೂ 40 ಸಾವಿರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಇಂದು 31 ಸಾವಿರಕ್ಕೆ ಬಂದಿದೆ. ರಾಜ್ಯದಲ್ಲಿ 403 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

corona
corona

By

Published : May 16, 2021, 7:55 PM IST

ಬೆಂಗಳೂರು: ರಾಜ್ಯದಲ್ಲಿಂದು 31,531 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 22,03,462ಕ್ಕೆ ಏರಿಕೆ ಆಗಿದೆ.

ಇಂದು 36,475 ಮಂದಿ ಗುಣಮುಖರಾಗಿದ್ದು, ಈವರೆಗೆ 15,81,457 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6,00,147 ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 27.84 ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ 1.27 ರಷ್ಟು‌ ಇದೆ.‌ ಇಂದು ಕೋವಿಡ್​​ಗೆ 403 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 21,837ಕ್ಕೆ ತಲುಪಿದೆ.

ಬೆಂಗಳೂರಲ್ಲಿ 8,344 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,51,058ಕ್ಕೆ ಏರಿದೆ. ಇಂದು 13,612 ಗುಣಮುಖರಾಗಿದ್ದು, ಈವರೆಗೆ ಒಟ್ಟು 6,80,194 ಜನರು ಡಿಸ್ಚಾರ್ಜ್ ಆಗಿದ್ದಾರೆ.‌

ನಗರದಲ್ಲಿಂದು 143 ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 9,483 ಕ್ಕೆ ಏರಿದೆ. ಸದ್ಯ 3,61,380 ಸಕ್ರಿಯ ಪ್ರಕರಣಗಳಿವೆ.

ಓದಿ- ಕೋವಿಡ್ ಸೋಂಕಿದ್ದರೂ ಮನೆಗೆ ಬಂದ ಅಣ್ಣನ ಕೊಂದ ತಮ್ಮ!

ABOUT THE AUTHOR

...view details