ಬೆಂಗಳೂರು:ರಾಜ್ಯದಲ್ಲಿಂದು 37,733 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 16,01,865ಕ್ಕೆ ಏರಿಕೆ ಆಗಿದೆ.
ಇಂದು ಕೋವಿಡ್ಗೆ 217 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,011ಕ್ಕೆ ಏರಿದೆ. 21,149 ಮಂದಿ ಗುಣಮುಖರಾಗಿದ್ದು, ಈವರೆಗೆ 11,64,398 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,21,436ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 23.82 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 0.57 ರಷ್ಟು ಇದೆ.
ಬೆಂಗಳೂರಲ್ಲಿ 21,199 ಜನರಿಗೆ ಇಂದು ಕೊರೊನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 7,97,292ಕ್ಕೆ ಏರಿದೆ. 10,361 ಸೋಂಕಿತರು ಗುಣಮುಖರಾಗಿದ್ದು, 5,08,923 ಡಿಸ್ಚಾರ್ಜ್ ಆಗಿದ್ದಾರೆ. 64 ಜನರು ಮೃತರಾಗಿದ್ದು, ಈವರೆಗೆ 6,601 ಜನರು ಬಲಿಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2,81,767 ರಷ್ಟು ಇದೆ.
ರಾಜ್ಯದಲ್ಲಿ ಎರಡನೇ ದಿನದ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಲಸಿಕಾ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಕೇವಲ 245 ಮಂದಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ.
ರಾಜ್ಯಾದ್ಯಂತ ಕೊರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 98,05,229 ಮಂದಿ ಪಡೆದಿದ್ದಾರೆ. ಇದರಲ್ಲಿ ಮೊದಲ ಡೋಸ್ಅನ್ನು ಆರೋಗ್ಯ ಕಾರ್ಯಕರ್ತರು 6,79,513 ಮಂದಿ, ಎರಡನೇ ಡೋಸ್ 4,33,712 ಮಂದಿ ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತರು 4,33,712, ಎರಡನೇ ಡೋಸ್ಅನ್ನ 1,60,612 ಮಂದಿ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರು ಮೊದಲ ಡೋಸ್ನಲ್ಲಿ 35,36,248, ಎರಡನೇ ಡೋಸ್ನಲ್ಲಿ 7,47,242 ತೆಗೆದುಕೊಂಡಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿರುವವರು ಮೊದಲ ಡೋಸ್ 35,59,037 ಮಂದಿ, ಎರಡನೇ ಡೋಸ್ 2,67,147 ಲಸಿಕೆ ಪಡೆದುಕೊಂಡಿದ್ದಾರೆ.