ಬೆಂಗಳೂರು: ರಾಜ್ಯದಲ್ಲಿ ಇಂದು 1,565 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,61,647ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಇಂದು 1565 ಜನರಿಗೆ ಕೊರೊನಾ: 21 ಸೋಂಕಿತರು ಬಲಿ - ಕರ್ನಾಟಕ ಕೋವಿಡ್ 19 ಅಪ್ಡೇಟ್
20:36 November 15
ಬೆಂಗಳೂರಲ್ಲಿ ಕೊರೊನಾ ಇಳಿಕೆ
ಸೋಂಕಿಗೆ ಇಂದು 21 ಜನ ಮೃತರಾಗಿದ್ದು, ಒಟ್ಟು ಸಾವಿನ ಸಂಖ್ಯೆ 11,529ಕ್ಕೆ ಏರಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. ಇತ್ತ 2,363 ಮಂದಿ ಡಿಸ್ಜಾರ್ಜ್ ಆಗಿದ್ದು, 8,22,953 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 27,146 ಇದ್ದು, 746 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 38,074 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ 1,88,124, ದ್ವಿತೀಯ ಸಂಪರ್ಕದಲ್ಲಿ 2,03,225 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ಈವರೆಗೆ ರಾಜ್ಯದಲ್ಲಿ 94,92,080 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 840 ಮಂದಿಗೆ ಸೋಂಕು ದೃಢ; 6 ಸೋಂಕಿತರು ಬಲಿ
ಬೆಂಗಳೂರಲ್ಲಿ ಕೊರೊನಾ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 840 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,57,280ಕ್ಕೆ ಏರಿಕೆ ಆಗಿದೆ. 847 ಜನರು ಡಿಸ್ಜಾರ್ಜ್ ಆಗಿದ್ದು, 3,35,105 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಬೆಂಗಳೂರಲ್ಲಿ 18,171 ಸಕ್ರಿಯ ಪ್ರಕರಣಗಳು ಇವೆ. 6 ಸೋಂಕಿತರು ಮೃತರಾಗಿದ್ದು, 4,003ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ.