ಕರ್ನಾಟಕ

karnataka

ETV Bharat / city

‌‌COVID Report.. ರಾಜ್ಯದಲ್ಲಿಂದು 349 ಮಂದಿಗೆ ಸೋಂಕು, 14 ಜನ ಸಾವು

ರಾಜ್ಯದಲ್ಲಿಂದು 349 ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, 14 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

covid
covid

By

Published : Oct 19, 2021, 6:45 PM IST

ಬೆಂಗಳೂರು: ರಾಜ್ಯದಲ್ಲಿಂದು 85,022 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 349 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,84,022ಕ್ಕೆ ಏರಿಕೆ ಆಗಿದೆ. 399 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,36,926 ಜನ ಗುಣಮುಖರಾಗಿದ್ದಾರೆ.

ಇಂದು 14 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,967 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 9100 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.41 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.4.01 ರಷ್ಟಿದೆ.

ರಾಜಧಾನಿಯಲ್ಲಿ 161 ಮಂದಿಗೆ ಸೋಂಕು:
ಇಂದು ಬೆಂಗಳೂರಲ್ಲಿ 161 ಪ್ರಕರಣಗಳು ದೃಢಪಟ್ಟಿದ್ದು, 12,49,662 ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 125 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 12,26,666 ಜನ ಡಿಸ್ಚಾರ್ಜ್ ಆಗಿದ್ದಾರೆ. 5 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,219 ಕ್ಕೆ ಏರಿಕೆ‌ ಆಗಿದ್ದು, ಸದ್ಯ ಸಕ್ರಿಯ 6776 ಪ್ರಕರಣಗಳು ಇವೆ.

ರೂಪಾಂತರಿ ಅಪ್​ಡೇಟ್:
ಅಲ್ಫಾ - 155
ಬೀಟಾ - 08
ಡೆಲ್ಟಾ - 1679
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H -15
ಕಪ್ಪಾ - 160
ಈಟಾ - 01

(ಇದನ್ನೂ ಓದಿ: ನವೆಂಬರ್​​ನಿಂದ ವೆಚ್ಚ ಕಡಿತ ಕ್ರಮಗಳು ಜಾರಿ: ವೆಚ್ಚ ಕಡಿತಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಸರ್ಕಾರ!)

ABOUT THE AUTHOR

...view details