ಬೆಂಗಳೂರು :ರಾಜ್ಯದಲ್ಲಿಂದು 1,18,032 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 335 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,02,127ಕ್ಕೆ ಏರಿಕೆ ಆಗಿದೆ.
ಇನ್ನು 286 ಮಂದಿ ಗುಣಮುಖರಾಗಿದ್ದು, ಈ ತನಕ 29,56,691 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು 5 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 38,287ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7120ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.28ರಷ್ಟಿದ್ದು, ಸಾವಿನ ಪ್ರಮಾಣ ಶೇ.1.49ರಷ್ಟು ಇದೆ.
ರಾಜಧಾನಿ ಬೆಂಗಳೂರಲ್ಲಿಂದು 225 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,59,963ಕ್ಕೆ ಏರಿದೆ. 180 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 12,37,945 ಗುಣಮುಖರಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,377ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5,640ರಷ್ಟಿದೆ.
ರೂಪಾಂತರಿ ಅಪಡೇಟ್ಸ್ :
ಅಲ್ಪಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 14
(ಇದನ್ನೂ ಓದಿ: Omicron : ದ.ಕನ್ನಡದ 5 ಮಂದಿ ಸೇರಿ 14ಕ್ಕೆ ಏರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ..)