ಬೆಂಗಳೂರು: ರಾಜ್ಯದಲ್ಲಿಂದು 88,387 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 301 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,98,400ಕ್ಕೆ ಏರಿಕೆ ಆಗಿದೆ.
ಇಂದು 359 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,53,067 ಮಂದಿ ಗುಣಮುಖರಾಗಿದ್ದಾರೆ. 7 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,237 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 7,067 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.34 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.2.32 ರಷ್ಟಿದೆ.
ವಿಮಾನ ನಿಲ್ದಾಣದಲ್ಲಿ 2,032 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶಗಳಿಂದ 536 ಪ್ರಯಾಣಿಕರು ಆಗಮಿಸಿದ್ದಾರೆ. 9 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸೋಂಕಿನ ಪ್ರಮಾಣ ವರದಿಯಾಗಿಲ್ಲ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಕೊಡಗು, ತುಮಕೂರುನಲ್ಲಿಷ್ಟೇ ಸಾವಿನ ವರದಿಯಾಗಿದ್ದು, ಉಳಿ ಜಿಲ್ಲೆಯಲ್ಲಿ ಯಾವುದೇ ವರದಿಯಾಗಿಲ್ಲ.