ಬೆಂಗಳೂರು: ರಾಜ್ಯದಲ್ಲಿಂದು 66,993 ಮಂದಿಗೆ ಕೋವಿಡ್ (COVID TEST) ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 255 ಮಂದಿಗೆ ಸೋಂಕು (COVID Positive) ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,92,276ಕ್ಕೆ ಏರಿಕೆ ಆಗಿದೆ. ಇತ್ತ 667 ಮಂದಿ ಡಿಸ್ಚಾರ್ಜ್ ಆಗಿದ್ದು, 29,46,601 ಮಂದಿ ಗುಣಮುಖರಾಗಿದ್ದಾರೆ.
ಇಂದು 7 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 38,153ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,493 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.38 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.74ರಷ್ಟಿದೆ.
ವಿಮಾನ ನಿಲ್ದಾಣದಿಂದ 6,196 ಪ್ರಯಾಣಿಕರು ಆಗಮಿಸಿದ್ದಾರೆ. ಅವರೆಲ್ಲ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 1,255 ಪ್ರಯಾಣಿಕರು ಯುಕೆ ಯಿಂದ ಆಗಮಿಸಿದ್ದಾರೆ.