ಕರ್ನಾಟಕ

karnataka

ETV Bharat / city

COVID: ರಾಜ್ಯದಲ್ಲಿಂದು 245 ಮಂದಿಗೆ ಕೊರೊನಾ, ಮೂವರು ಸೋಂಕಿತರು ಬಲಿ - ಕೊರೊನಾ ಅಪ್​ಡೇಟ್

ಕರ್ನಾಟಕದಲ್ಲಿ ಇಂದು 245 ಜನರಿಗೆ ಕೋವಿಡ್ (Karnataka Covid) ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ..

corona
corona

By

Published : Nov 13, 2021, 7:36 PM IST

ಬೆಂಗಳೂರು :ರಾಜ್ಯದಲ್ಲಿಂದು 1,01,119 ಮಂದಿಗೆ ಕೋವಿಡ್ (Karnataka COVID) ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 245 ಮಂದಿಗೆ (corona cases) ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,91,614ಕ್ಕೆ ಏರಿಕೆ ಆಗಿದೆ. ಇತ್ತ 251 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 29,45,415 ಮಂದಿ ಗುಣಮುಖರಾಗಿದ್ದಾರೆ.

ಇಂದು ಮೂವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,143ಕ್ಕೆ ಏರಿದೆ. ಸದ್ಯ 8,027ರಷ್ಟು ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.24 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.22 ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,341 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದು, 339 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 154 ಮಂದಿಗೆ (Bengaluru covid) ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,53,823ಕ್ಕೆ ಏರಿದೆ. 160 ಜನರು ಗುಣಮುಖರಾಗಿದ್ದು, 12,30,875 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,310ಕ್ಕೆ ಏರಿದೆ. ಸದ್ಯ 6637 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪಡೇಟ್ :ಅಲ್ಫಾ - 155ಬೇಟಾ - 08ಡೆಲ್ಟಾ - 1698ಡೆಲ್ಟಾ ಪ್ಲಸ್ - 04ಡೆಲ್ಟಾ ಸಬ್ ಲೈನ್ಏಜ್ - 256ಡೆಲ್ಟಾ ಸಬ್ ಲೈನ್ಏಜ್ AY.12H -15ಕಪ್ಪಾ - 160ಈಟಾ - 01

ABOUT THE AUTHOR

...view details