ಬೆಂಗಳೂರು :ರಾಜ್ಯದಲ್ಲಿಂದು 5532 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿದೆ.
24ಗಂಟೆಯಲ್ಲಿ 84 ಮಂದಿ ಬಲಿಯಾಗಿದ್ದಾರೆ. ಈವರೆಗಿನ ಮೃತರ ಸಂಖ್ಯೆ2496. 57,725 ಮಂದಿ ಗುಣಮುಖರಾಗಿದ್ದು, 74,590 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 638 ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕ್ವಾರಂಟೈನ್ನಲ್ಲಿರುವವರ ಸಂಖ್ಯೆ 2 ಲಕ್ಷ ದಾಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರು 1,18,631 ದ್ವಿತೀಯ ಸಂಪರ್ಕಿತರು 1,06,741 ಮಂದಿ ಇದ್ದಾರೆ. 2,25,372 ಮಂದಿ ನಿಗಾವಣೆಯಲ್ಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದ ಜಿಲ್ಲಾಡಳಿತ
ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು, ಬೆಂಗಳೂರಿನಲ್ಲಿ ಸ್ಮಶಾನಕ್ಕೆ ಜಿಲ್ಲಾಡಳಿತವು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದೆ. ಸ್ಮಶಾನಗಳು ತುಂಬಿ ಹೋಗಿರುವ ಹಿನ್ನೆಲೆ ಅಂತ್ಯಕ್ರಿಯೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕೊರೊನಾ ಸೋಂಕಿತರನ್ನ ಸುಡಲು 4 ಚಿತಾಗಾರಗಳನ್ನ ಮೀಸಲಿಟ್ಟಿರುವ ಪಾಲಿಕೆ, ಯಾವುದೇ ತೊಂದರೆ ಆಗಬಾರದು ಅಂತಾ 23 ಎಕರೆ 1 ಗುಂಟೆ ಜಾಗ ಗುರುತಿಸಿದೆ. ಸಾರ್ವಜನಿಕ ಸ್ಮಶಾನಕ್ಕಾಗಿ ಗುರುತಿಸಿರುವ ಸರ್ಕಾರಿ ಜಮೀನು ಪಟ್ಟಿ ಇಂತಿದೆ.
- ಬೆಂಗಳೂರು ಉತ್ತರದ ಗಿಡ್ಡೆಹಳ್ಳಿ ಗ್ರಾಂ ಸರ್ವೆ ನಂಬರ್ 80 ರಲ್ಲಿ 4 ಎಕರೆ
- ಅಗ್ರಹಾರ ಪಾಳ್ಯ ಗ್ರಾಮ ಸರ್ವೇ ನಂ 29 ರಲ್ಲಿ 3 ಎಕರೆ
- ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಉತ್ತರಹಳ್ಳಿ ಹೋಬಳಿ ಗುಳಿಕಮಲೆ ಗ್ರಾಮ ಸವೇ ನಂ 35 ರಲ್ಲಿ 4 ಎಕರೆ
- ಆನೇಕಲ್ ಜಿಗುಣಿ ಹೋಬಳಿಯಲ್ಲಿ ಗಿಡ್ಡೆನಹಳ್ಳಿ ಗ್ರಾಮದ ಸರ್ವೇ ನಂಬರ್ 23 ರಲ್ಲಿ 3 ಎಕರೆ
- ಸರ್ಜಾಪುರ ಹೋಬಳಿ - ಇಟ್ಟಂಗೂರು ಗ್ರಾಂ ಸರ್ವೆ ನಂ 13ರಲ್ಲಿ 3 ಎಕರೆ 39 ಗುಂಟೆ
- ಯಲಹಂಕ ತಾಲೂಕು ಕುದುರೆಗೆರೆ ಗ್ರಾಮದಲ್ಲಿ1.20 ಎಕರೆ
- ಮಾರೇನಹಳ್ಳಿ ಬಳಿ12 ಗುಂಟೆ
- ಬೋಯಿಲಹಳ್ಳಿ ಗ್ರಾಮ 1 ಎಕರೆ
ಒಟ್ಟು 23 ಎಕರೆ 1 ಗುಂಟೆ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಕೊರೊನಾದಿಂದ ಮೃತಪಟ್ಟರು ಮತ್ತು ಇತರೆ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಉಳಿದ 12 ಎಕರೆ 17 ಗುಂಟೆ ಎಕರೆ ಜಾಗ ಶೀಘ್ರವೇ ಗುರುತಿಸಲಾಗ್ತಿದೆ.
ಹೋಮ್ ಐಸೋಲೇಶನ್ ಮೊರೆ :ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಈ ತಿಂಗಳಲ್ಲಿ ಹೆಚ್ಚು ಕೊರೊನಾ ಕೇಸ್ ಪತ್ತೆಯಾದ್ರೆ ಹೋಮ್ ಐಸೋಲೇಷನ್ಗೆ ಒತ್ತು ನೀಡಲು ಪಾಲಿಕೆ ಮುಂದಾಗಿದೆ. ಅಲ್ಲದೆ ಇನ್ಮುಂದೆ ಕೊರೊನಾ ಬಂದರೆ ಶೇ. 40- 50ರಷ್ಟು ಮಂದಿಯನ್ನು ಹೋಮ್ ಐಸೋಲೇಷನ್ನಲ್ಲಿ ಸೇರಿಸಲು ಪಾಲಿಕೆ ಪ್ಲಾನ್ ಮಾಡುತ್ತಿದೆ. ಈಗಾಗಲೇ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.