ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಕಾಲಿಟ್ಟು ಇಂದಿಗೆ 150 ದಿನಗಳು ಕಳೆದಿವೆ. ಕೇವಲ 150 ದಿನಗಳಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ.
1,01,465 ಸೋಂಕಿತರ ಪೈಕಿ ಕೇವಲ 37,685 ಮಾತ್ರ ಗುಣಮುಖರಾಗಿದ್ದು, ಉಳಿದ 61,819 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದೇ ದಿನ 5324 ಹೊಸ ಪಾಸಿಟಿವ್ ಪತ್ತೆ ಆಗಿದ್ದರೆ, 75 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 1953ಕ್ಕೆ ಏರಿದೆ. 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,39,411 ನಿಗಾದಲ್ಲಿದ್ದಾರೆ.
ರಾಜ್ಯದ ಮೆಡಿಕಲ್ ಕಾಲೇಜು 5000 ಹಾಸಿಗೆ ಮೀಸಲು:
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯದ ಸರ್ಕಾರಿ & ಖಾಸಗಿ ವೈದ್ಯಕೀಯ ಕಾಲೇಜುಗಳು ಮುಂಚೂಣಿಯಲ್ಲಿವೆ ಎಂದು ಸಚಿವ ಡಾ ಸುಧಾಕರ್ ಟೀಟ್ ಮಾಡಿದ್ದಾರೆ. ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 10,000 ಬೆಡ್ಗಳಲ್ಲಿ 5,000 ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಓಟಿಪಿ (OTP) ಬಂದ ನಂತರವಷ್ಟೇ ಪರೀಕ್ಷೆ:
ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಕೋವಿಡ್ ಟೆಸ್ಟ್ ಮಾಡಿದರಷ್ಟೇ ಸುಲಭವಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ಮೊಬೈಲ್ ನಂಬರ್ ಕೊಡುತ್ತಿದ್ದಾರೆ. ಕಡ್ಡಾಯವಾಗಿ ಆಧಾರ್, ಐಡಿ ಕಾರ್ಡ್ ತೋರಿಸಿ ಓಟಿಪಿ ಬಂದ ಮೇಲೆ ಟೆಸ್ಟ್ ಮಾಡಲು ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.
ಕೋವಿಡ್ ನಿಯಂತ್ರಣಾ ಕಾರ್ಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಿದೆ. ಸುಮಾರು 2,000 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸೋಂಕಿತರ ಚಿಕಿತ್ಸೆಗೆ ಮತ್ತು 2,000 ಎಂಬಿಬಿಎಸ್, ನರ್ಸಿಂಗ್ ವಿದ್ಯಾಥಿಗಳನ್ನು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಈ ಸಂದರ್ಭದಲ್ಲಿ 7ನೇ ವೇತನ ಆಯೋಗ ಅನ್ವಯ ವೈದ್ಯಕೀಯ ಬೋಧಕ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿದೆ.
ಕೋವಿಡ್ ರೋಗಿಯ ನಿರ್ವಹಣೆಯ ಖರ್ಚು ವೆಚ್ಚ ಎಷ್ಟು ಗೊತ್ತಾ..?
ಹಾಸಿಗೆ ಖರ್ಚು: 100 ಹಾಸಿಗೆಗೆ ದಿನಕ್ಕೆ 500 ರೂಪಾಯಿಯಂತೆ ತಿಂಗಳಿಗೆ 15 ಲಕ್ಷ ಖರ್ಚು ಆಗಲಿದೆ.