ಕರ್ನಾಟಕ

karnataka

ETV Bharat / city

ಕರುನಾಡಲ್ಲಿ ಮುಂದುವರೆದ ಕೊರೊನಾ ಬೇಟೆ.. ರಾಜ್ಯದಲ್ಲಿ ಇಂದು 3,648 ಸೋಂಕಿತರು ಪತ್ತೆ - ಕೊರೊನಾ ಪ್ರಕರಣಗಳು

ಇಂದು ಕೂಡಾ ರಾಜ್ಯದಲ್ಲಿ ಕೊರೊನಾ ತನ್ನ ಹಟ್ಟಹಾಸ ಮುಂದುವರೆಸಿದ್ದು, ಕರುನಾಡಲ್ಲಿ ಮಹಾಮಾರಿಗೆ ಹಲವಾರು ಜನ ಬಲಿಯಾಗಿದ್ದಾರೆ. ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಅದೆಷ್ಟೋ ಕ್ರಮಗಳನ್ನು ಕೈಗೊಂಡರು ಕೋವಿಡ್​ ಕಂಟ್ರೋಲ್​ಗೆ ಬರುತ್ತಿಲ್ಲ. ಅಲ್ಲದೆ ಪೊಲೀಸರಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

karnataka-corona-report
ಸೋಂಕಿತರು ಪತ್ತೆ

By

Published : Jul 20, 2020, 9:35 PM IST

Updated : Jul 20, 2020, 10:34 PM IST

ಬೆಂಗಳೂರು :ರಾಜ್ಯದಲ್ಲಿಂದು 3,648 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 72 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲೇ 1,452 ಜನರಿಗೆ ಸೋಂಕು ತಗುಲಿದ್ರೆ, 31 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರುಗಳ ಸೋಂಕಿತರ ಮಾಹಿತಿ ಈ ಕೆಳಗಿನಂತಿದೆ.

ಚಿಕ್ಕಮಗಳೂರು :ಜಿಲ್ಲೆಯಲ್ಲಿ ಈ ದಿನ 43 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 334ಕ್ಕೆ ಏರಿದೆ. ಇಂದು 18 ಜನ ಸೇರಿ ಒಟ್ಟಾರೆ ಈವರೆಗೆ 154 ಮಂದಿ ಬಿಡುಗಡೆಯಾದಂತಾಗಿದೆ. ಒಟ್ಟು 171 ಸಕ್ರಿಯ ಪ್ರಕರಣಗಳಿವೆ. ಚಿಕ್ಕಮಗಳೂರು 12, ತರೀಕೆರೆ 05, ಕಡೂರು 04, ಎನ್ಆರ್ ಪುರ 02, ಕೊಪ್ಪ 17, ಶೃಂಗೇರಿಯಲ್ಲಿ ಮೂವರಲ್ಲಿ ಈ ಸೋಂಕು ಪತ್ತೆಯಾಗಿದೆ. ಈವರೆಗಿನ ಸೋಂಕಿತರ ಸಾವಿನ ಸಂಖ್ಯೆ 9.

ತುಮಕೂರು :ಜಿಲ್ಲೆಯಲ್ಲಿ ಇಂದು 53 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ತುಮಕೂರು ತಾಲೂಕಿನ 45 ಮಂದಿ, ತುರುವೇಕೆರೆ ತಾಲೂಕಿನ 5 ಜನ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಇಬ್ಬರು ಪಾವಗಡದಲ್ಲಿ ಓರ್ವ ವ್ಯಕ್ತಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೊಂದೆಡೆ ತುಮಕೂರು ಜಿಲ್ಲೆಯಲ್ಲಿ ಇಂದು 28 ಮಂದಿ ಸೋಂಕಿತರು ಪತ್ತೆಯಾಗಿದ್ದು, ಕುಣಿಗಲ್ ತಾಲೂಕಿನಲ್ಲಿ 24 ಮಂದಿ, ಮಧುಗಿರಿ ಮತ್ತು ಪಾವಗಡ ತಾಲೂಕಿನಲ್ಲಿ ತಲಾ 10 ಮಂದಿ, ತುಮಕೂರು ತಾಲೂಕಿನಲ್ಲಿ 17 ಮಂದಿ, ಕೊರಟಗೆರೆ ತಾಲೂಕಿನಲ್ಲಿ 8 ಮಂದಿ, ಶಿರಾ ತಾಲೂಕಿನಲ್ಲಿ 6, ತಿಪಟೂರು ತಾಲೂಕಿನಲ್ಲಿ 2, ತುರುವೇಕೆರೆಯಲ್ಲಿ ಓರ್ವ ವ್ಯಕ್ತಿಗೆ ಸೋಂಕು ಧೃಢವಾಗಿದೆ. ಜಿಲ್ಲೆಯಲ್ಲಿ ಇಂದು ಮೂವರು ಮೃತಪಟ್ಟಿದ್ದಾರೆ. ಇಬ್ಬರು ಗರ್ಭಿಣಿಯರು ಹಾಗೂ ಬಾಣಂತಿ ಕೂಡ ಸೋಂಕಿಗೊಳಗಾಗಿದ್ದಾರೆ.

ಚಾಮರಾಜನಗರ :ಇಂದು ಒಂದೇ ದಿನ‌ ಚಾಮರಾಜನಗರ ಜಲ್ಲೆಯಲ್ಲಿ, 49 ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 346ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 11 ಮಂದಿ ಬಿಡುಗಡೆಯಾಗಿದ್ದಾರೆ. 143 ಸಕ್ರಿಯ ಪ್ರಕರಣಗಳಿವೆ. ಗುಂಡ್ಲುಪೇಟೆಯಲ್ಲಿ 19, ಕೊಳ್ಳೇಗಾಲ 19, ಚಾಮರಾಜನಗರ 5, ಹನೂರು 2 ಹಾಗೂ ಯಳಂದೂರು ಭಾಗದ ನಾಲ್ವರಿಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳಲ್ಲಿ ಗುಂಡ್ಲುಪೇಟೆ ತಾಲೂಕಿನ 49 ಮಂದಿ, ಕೊಳ್ಳೇಗಾಲದ 45 ಮಂದಿ, ಚಾಮರಾಜನಗರದ 30 ಮಂದಿ, ಯಳಂದೂರಿನ 10 ಹಾಗೂ ಹನೂರಿನ 8 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ‌ ಗ್ರಾಮದಲ್ಲೊಂದು ಪ್ರಕರಣ ಪತ್ತೆಯಾಗುವ ಮೂಲಕ ಬೆಟ್ಟದ ಮಂದಿ ಕಳವಳಗೊಂಡಿದ್ದಾರೆ‌.

ಹಾವೇರಿ :ಜಿಲ್ಲೆಯಲ್ಲಿ ಇಂದು 36 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 55 ಜನರ ಗುಣಮುಖರಾಗಿದ್ದಾರೆ. ಶಿಗ್ಗಾಂವಿ ತಾಲೂಕಿನಲ್ಲಿ 13, ಹಾವೇರಿ 6, ಸವಣೂರು ಮತ್ತು ಹಾನಗಲ್‌ ತಲಾ 5 ಹಾಗೂ ಬ್ಯಾಡಗಿ ತಾಲೂಕಿನಲ್ಲಿ 4 ರಾಣೇಬೆನ್ನೂರು ತಾಲೂಕಿನಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 495 ಕ್ಕೇರಿದಂತಾಗಿದೆ. ಜಿಲ್ಲೆಯಲ್ಲಿ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ. ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈವರೆಗೂ ಜಿಲ್ಲೆಯಲ್ಲಿ 495 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ 347 ಜನ ಗುಣಮುಖರಾಗಿದ್ದಾರೆ. 12 ಜನ ಸಾವನ್ನಪ್ಪಿದ್ದು, 136 ಜನ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಆರು ಜನರನ್ನ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರು :ಜಿಲ್ಲೆಯಲ್ಲಿ ಇಂದು 3 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ 999ಕ್ಕೆ ತಲುಪಿದೆ. ಸೋಂಕಿತರೆಲ್ಲ ರಾಯಚೂರು ನಗರ ನಿವಾಸಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 642 ಸೋಂಕಿತರ ಗುಣಮುಖ ಹೊಂದಿದ್ದು, ಇನ್ನುಳಿದ 344 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಇಂದು 60 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರ 22, ಚಿಂತಾಮಣಿ 1, ಬಾಗೇಪಲ್ಲಿ 3, ಶಿಡ್ಲಘಟ್ಟ 1, ಗೌರಿಬಿದನೂರು 3 ಮತ್ತು ಗುಡಿಬಂಡೆಯಲ್ಲಿ 2 ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 918ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 20 ಜನ ಮೃತಪಟ್ಟಿದ್ದು, ಇವರಲ್ಲಿ 19 ಜನ ಕೋವಿಡ್​-19ರಿಂದ ಮೃತರಾದ್ರೆ, ಇನ್ನೊಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. 382 ಜನ ಸೋಂಕಿತರು ಗುಣಮುಖರಾಗಿದ್ದು, 498 ಪ್ರಕರಣ ಸಕ್ರಿಯವಾಗಿವೆ.

ಕೊಪ್ಪಳ :ಜಿಲ್ಲೆಯಲ್ಲಿಂದು ಮತ್ತೆ 57 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 572ಕ್ಕೆ ಏರಿಕೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ 30, ಗಂಗಾವತಿ 25 ಹಾಗೂ ಯಲಬುರ್ಗಾ ಇಬ್ಬರು ಸೇರಿ, ಒಟ್ಟು 57 ಜನರಿಗೆ ಕೋವಿಡ್​​ ಪಾಸಿಟಿವ್ ದೃಢಪಟ್ಟಿದೆ. ಈವರೆಗೆ ಕೊರೊನಾ ಸೋಂಕಿಗೆ 12 ಜನರು ಬಲಿಯಾಗಿದ್ದು, ಇಂದು 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 337 ಜನರು ಗುಣಮುಖವಾಗಿದ್ದಾರೆ. 6 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಸೋಂಕಿತರ ಪೈಕಿ 34 ಜನರನ್ನು ಅವರ ಜಿಲ್ಲೆಗಳಿಗೆ ಶಿಫ್ಟ್ ಮಾಡಲಾಗಿದ್ದು, ಕೊಪ್ಪಳದ ನಿಗದಿತ ಕೋವಿಡ್-19 ಆಸ್ಪತೆಯಲ್ಲಿ 183 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 18,543 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. 18,090 ಜನರ ವರದಿ ಬಂದಿದೆ. ಇನ್ನೂ 453 ಜನರ ವರದಿ ಇನ್ನೂ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರು ತಿಳಿಸಿದ್ದಾರೆ.

ಶಿವಮೊಗ್ಗ :ಜಿಲ್ಲೆಯಲ್ಲಿ ಇಂದು 12 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 869ಕ್ಕೆ‌ ಏರಿಕೆಯಾಗಿದೆ. 61 ಜನ ಗುಣಮುಖರಾಗಿದ್ದಾರೆ. ಈವರೆಗೂ 489 ಜನ ಗುಣಮುಖರಾಗಿದ್ದಾರೆ. 365 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 172 ಜನ, ಗಾಜನೂರಿನ ಮೂರಾರ್ಜಿ ವಸತಿ ಶಾಲೆಯಲ್ಲಿ 166, ಖಾಸಗಿ ಆಸ್ಪತ್ರೆಯಲ್ಲಿ 17 ಹಾಗೂ ಮನೆಯಲ್ಲಿಯೇ‌ 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಪತ್ತೆಯಾದ 12 ಜನ ಸೋಂಕಿತರಲ್ಲಿ‌, ಶಿವಮೊಗ್ಗ-04, ಭದ್ರಾವತಿ-06, ಸಾಗರ-01 ಹಾಗೂ ಶಿಕಾರಿಪುರ -01. ಜಿಲ್ಲೆಯಲ್ಲಿ 246 ಕಂಟೈನ್ಮೆಂಟ್ ಜೋನ್​ಗಳಿವೆ.

ವಿಜಯಪುರ :ಜಿಲ್ಲೆಯಲ್ಲಿ ಇಂದು 1600 ಜನ ಪೊಲೀಸರ ಸ್ವ್ಯಾಬ್ ಟೆಸ್ಟ ಮಾಡಲಾಗಿದ್ದು ಅದರಲ್ಲಿ 90 ಜನರಿಗೆ ಪಾಸಿಟಿವ್ ಬಂದಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ಹೇಳಿದ್ದಾರೆ. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ ಜನರಿಗೆ ಇನ್ಸಟ್ಯೂಷನ್ ಕ್ವಾರಂಟೈನ್​ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕ್ವಾರಂಟೈನ್​ ಅದರೂ ಸಹ ಜನರ ಸಹಕಾರ ನಮಗೆ ಉತ್ತಮವಾಗಿ ಸಿಗುತ್ತಿದೆ, ಅವಶ್ಯಕತೆ ಬಿದ್ದರೆ ಜನತೆಯ ಸಹಕಾರ ನಾವು ಕೇಳುತ್ತೇವೆ, ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಎಸ್​ಪಿ ತಿಳಿಸಿದರು. ಇದೇ ವೇಳೆ ತಮ್ಮ ನಿವಾಸದಲ್ಲಿ ಸ್ವ್ಯಾಬ್ ಟೆಸ್ಟ್ ನೀಡಿದ್ದ ಎಸ್ಪಿ ಅನುಪಮ್ ಅಗರವಾಲ್ ಹಾಗೂ ಅವರ ಪತ್ನಿಯ ವರದಿ ನೆಗಟಿವ್ ಬಂದಿದೆ.

ರಾಣೆಬೆನ್ನೂರು :ತಾಲೂಕಿನ ತಹಶೀಲ್ದಾರರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ರಾಣೆಬೆನ್ನೂರ ನಗರ ಸೇರಿದಂತೆ ತಾಲೂಕಿನಲ್ಲಿ ಸತತವಾಗಿ ಕೊರೊನಾ ಕೆಲಸದಲ್ಲಿ ನಿರತರಾಗಿದ್ದ ಕಾರಣ ಅವರ ಗಂಟಲು ದ್ರವವನ್ನು ಪರೀಕ್ಷಿಸಲಾಗಿತ್ತು.‌ ಇಂದು ಬಂದ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ತಹಸೀಲ್ದಾರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆತಂಕ ಹೆಚ್ಚಾಗಿದೆ. ಸದ್ಯ ತಹಶೀಲ್​ ಕಚೇರಿಯ ಬಾಗಿಲು ಹಾಕಲಾಗಿದೆ.

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 67 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 953 ಕ್ಕೆ ಏರಿಕೆಯಾಗಿದೆ. ಈವರೆಗೆ 569 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 355 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 29 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇಂದು ಮೃತ ಪಟ್ಟ 42 ವರ್ಷದ ವ್ಯಕ್ತಿಯು ಹಾಸನ ತಾಲ್ಲೂಕಿಗೆ ಸಂಬಂದಿಸಿದವರಾಗಿದ್ದು ಇವರು ಸಕ್ಕರೆ ಕಾಯಿಲೆಯಿಂದ ಹಾಗೂ ಉಸಿರಾಟದ ತೊಂದರೆಯಿಂದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಇಂದು ಪತ್ತೆಯಾದ 67 ಪ್ರಕರಣಗಳಲ್ಲಿ 6 ಜನ ಅರಸೀಕೆರೆ ತಾಲ್ಲೂಕಿನವರು, 3 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, 23 ಜನ ಹಾಸನ ತಾಲ್ಲೂಕು, 8 ಜನ ಹೊಳೆನರಸೀಪುರ ತಾಲ್ಲೂಕು, ಆಲೂರು ತಾಲ್ಲೂಕಿನಲ್ಲಿ 8 ಜನ, 11 ಜನ ಅರಕಲಗೂಡು ತಾಲ್ಲೂಕು, 8 ಜನ ಬೇಲೂರು ತಾಲ್ಲೂಕಿನವರಾಗಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 5 ಮಂದಿ ಸಾವನ್ನಪ್ಪಿದ್ದಾರೆ. ಐವರಲ್ಲಿ ನಾಲ್ವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಓರ್ವ ಚಿಕ್ಕಮಗಳೂರು ಜಿಲ್ಲೆಯ ನಿವಾಸಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ 65 ವರ್ಷದ ಗಂಡಸು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ 55 ವರ್ಷದ ಗಂಡಸು, 63 ವರ್ಷದ ಗಂಡಸು, ಬೆಳ್ತಂಗಡಿಯ 42 ವರ್ಷದ ಗಂಡಸು ಮತ್ತು ಬಂಟ್ವಾಳದ ಎರಡು ತಿಂಗಳ ಮಗು ಕೊರೊನಾದಿಂದ ಮೃತಪಟ್ಟವರು. ಇದರಲ್ಲಿ ಬಂಟ್ವಾಳದ ಎರಡು ತಿಂಗಳ ಮಗು ಜುಲೈ 18 ರಂದು ಸಾವನ್ನಪ್ಪಿತ್ತು. ಮಗುವಿನ ಗಂಟಲು ದ್ರವದ ಪರೀಕ್ಷೆಯಲ್ಲಿ ಇಂದು ಕೊರೊನಾ ದೃಢಪಟ್ಟಿದೆ. ಮಗುವಿನ ಮೃತದೇಹವನ್ನು ಕೋವಿಡ್ ನಿಯಾಮಾವಳಿಯಂತೆ ಜುಲೈ 18 ರಂದು ಅಂತ್ಯಕ್ರಿಯೆ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. ಇದರಲ್ಲಿ 13 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 89 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 3685 ಕ್ಕೆ ಏರಿಕೆಯಾಗಿದೆ. ಇಂದು 57 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 1548 ಮಂದಿ ಗುಣಮುಖರಾಗಿದ್ದಾರೆ. 2055 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 73 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬೆಣ್ಣೆನಗರಿ ಮಂದಿ ಬೆಚ್ಚಿ ಬಿದ್ದಿದ್ದಾರೆ‌. ಇಷ್ಟೊಂದು ಕೇಸ್ ದಾಖಲಾಗಿದ್ದು ಇದೇ ಮೊದಲು. 64 ವರ್ಷದ ವೃದ್ದೆ ಬಲಿಯಾಗಿದ್ದು, ಮೃತರ ಸಂಖ್ಯೆ 30ಕ್ಕೇರಿದೆ. ತೀವ್ರ ಉಸಿರಾಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹರಿಹರ ತಾಲೂಕಿನ ಹರ್ಲಿಪುರ ಗ್ರಾಮದ 64 ವರ್ಷದ ಮಹಿಳೆಯಲ್ಲಿ‌ ಕೋವಿಡ್ ಇದ್ದದ್ದು ದೃಢಪಟ್ಟಿತ್ತು. ಆದ್ರೆ ಜುಲೈ 19ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ 34, ಹರಿಹರ 13, ಜಗಳೂರು 11, ಚನ್ನಗಿರಿ 9, ಹೊನ್ನಾಳಿ 2, ಹೊರ ಜಿಲ್ಲೆಗಳಿಂದ ಬಂದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 880 ಸೋಂಕಿತರಿದ್ದು, 571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 279 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಅರಕಲಗೂಡು : ಕೊಣನೂರು ಹೋಬಳಿಯ ಹೊಡೇನೂರು ಗ್ರಾಮದ ವಾಸಿಗೆ ಕೋರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ ಭಾಗದ ಬೀದಿಯನ್ನು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ, ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ, ಪಿಡಿಒ ಪರಮೇಶ್, ಗ್ರಾಮಲೆಕ್ಕಿಗ ಪುನೀತ್, ಶುಶ್ರೂಶಕಿ ಕಲಾವತಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸೀಲ್‌ಡೌನ್ ಮಾಡಲಾಯಿತು. ಪಾಸಿಟೀವ್ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ೮ ಮಂದಿಯ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ೧೬ ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪಾಸಿಟೀವ್ ಬಂದಿದ್ದAತಹ ವ್ಯಕ್ತಿಯನ್ನು ಹಾಸನದ ಕೋವಿಡ್ ಆಸ್ಪತ್ರಗೆ ಸ್ಥಳಾಂತರಿಸಲಾಗಿದೆ.

ವಿಜಯಪುರ: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 160 ಜನರಿಗೆ ಪ್ರಕರಣ ದೃಢಪಟ್ಟಿದೆ. ಓರ್ವ ಮಹಿಳೆ ಮೃತಪಟ್ಟಿದ್ದಾಳೆ. ವಿಜಯಪುರ ನಗರ 128, ಬಸವನ ಬಾಗೇವಾಡಿ 12, ಬಬಲೇಶ್ವರ 12, ಚಡಚಣ1, ದೇವರ ಹಿಪ್ಪರಗಿ 1, ಇಂಡಿ-3, ಕೊಲ್ಹಾರ್ 01, ಮುದ್ದೇಬಿಹಾಳ 01, ನಿಡಗುಂದಿ 0, ಸಿಂದಗಿ 0, ತಾಳಿಕೋಟೆ 01 ಕೇಸ್​​ ಪತ್ತೆಯಾಗಿವೆ. ಇಲ್ಲಿಯವರೆಗೆ 22 ಜನ ಸಾವನ್ನಪ್ಪಿದ್ದಾರೆ. ಒಟ್ಟು 40,068 ಜನರ ಮೇಲೆ ನಿಗಾ ಇಡಲಾಗಿದೆ. 39.098 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 36, 405 ಜನರ ವರದಿ ನೆಗಟಿವ್ ಬಂದಿದೆ. 1745 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ 948 ಜನರ ವರದಿ ಬರಬೇಕಾಗಿದೆ.

ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದೂ 60 ಜನರಿಗೆ ಸೋಂಕು ‌ವಕ್ಕರಿಸಿದೆ. ಸೋಂಕಿತರ ಸಂಖ್ಯೆ 1079ಕ್ಕೇರಿಕೆಯಾಗಿದೆ. ಈವರೆಗೂ ಕೊರೊನಾದಿಂದ 26 ಜನರು ಮೃತಪಟ್ಟಿದ್ದು, 435 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 618 ಕೊರೊನಾ ಸಕ್ರಿಯ ಕೇಸ್‌ಗಳಿವೆ.

ಮೈಸೂರು:149 ಮಂದಿಗೆ ಕೊರೊನಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಕ್ರಿಯ ಪ್ರಕರಣ 1,073ಕ್ಕೇರಿದೆ. ಸಂಪರ್ಕದಿಂದ 149 ಮಂದಿಗೆ, ಐಎಲ್​ಐ 50, ಪ್ರಯಾಣದ ಹಿನ್ನೆಲೆಯುಳ್ಳವರ 16, ಎಸ್​ಎಆರ್​​ಐ 11, ರೋಗದ ಲಕ್ಷಣ ಇರುವವವರು 5 ಮಂದಿ ಸೇರಿದಂತೆ 149 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗುಣಮುಖರಾದ 27 ಮಂದಿಗೆ ಡಿಸ್ಚಾರ್ಜ್​​​​ ಆಗಿದ್ದರೆ, 5 ಮಂದಿಗೆ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 625 ಮಂದಿ ಡಿಸ್ಚಾರ್ಜ್​​​​ ಆಗಿದ್ದರೆ, 1,073 ಮಂದಿ ವಿವಿಧ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 75 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಧಾರವಾಡ:ಜಿಲ್ಲೆಯಲ್ಲಿ ಕೊರೊನಾ ಇಂದು ದ್ವಿಶತಕ ಬಾರಿಸಿದೆ. ಒಂದೇ 200 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ 2,243ಕ್ಕೇರಿದೆ. ಐಎಲ್​ಐ ಸಮಸ್ಯೆಯಿಂದ ದಾಖಲಾದ 101 ಜನರಿಗೆ, ಸೋಂಕಿತರ ಸಂಪರ್ಕದಿಂದ 75 ಜನರಿಗೆ, ಕೊರೊನಾ ಅಂತರ್‌ಜಿಲ್ಲಾ ಪ್ರವಾಸದಿಂದ ನಾಲ್ವರಿಗೆ ತಗುಲಿದ್ದು, 17 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಎಸ್​ಎಆರ್​ಐ ಸಮಸ್ಯೆ ಇದ್ದ ಇಬ್ಬರಿಗೆ ಹಾಗೂ ಅಂತಾರಾಷ್ಟ್ರೀಯ ಪ್ರವಾಸದಿಂದ ಬಂದ ಒಬ್ಬರಿಗೆ ಸೋಂಕು ಹರಡಿದೆ. ಕೊರೊನಾದಿಂದ 6 ಜನ ಸೋಂಕಿತರು ಮೃತಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 68ಕ್ಕೇರಿದೆ. 33 ಜನ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.

ಚಿತ್ರದುರ್ಗ:ಜಿಲ್ಲೆಯಲ್ಲಿ 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಆರು ಜನ ಮೃತಪಟ್ಟಿದ್ದಾರೆ. 117 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 125 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 54 ಸೋಂಕಿ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 743ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 322 ಸೋಂಕಿತರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.ಇನ್ನು ಸಕ್ರಿಯ ಪ್ರಕರಣ 388 ಇದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 20, ಜಮಖಂಡಿ 9, ಬಾದಾಮಿ 9, ಹುನಗುಂದ 9, ಬೀಳಗಿ 2, ಮುಧೋಳದಲ್ಲಿ 1, ರಾಯಚೂರು ಜಿಲ್ಲೆಯ 1, ವಿಜಯಪುರ ಜಿಲ್ಲೆಯ 3 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಗದಗ:ಇಂದು ಮತ್ತೆ 30 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 616ಕ್ಕೇರಿಕೆಯಾಗಿದೆ. ಇನ್ನು ಇಂದು ಯಾವುದೇ ವ್ಯಕ್ತಿ ಗುಣಮುಖರಾಗಿಲ್ಲ. ಇದುವರೆಗೂ ಗುಣಮುಖರಾಗಿ ಬಿಡುಗಡೆ ಹೊಂದಿದವರು 226 ಜನ. ಇನ್ನು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 376 ಇದ್ದು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಗದಗನಲ್ಲಿ ಇದುವರೆಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ತಲುಪಿದೆ.

Last Updated : Jul 20, 2020, 10:34 PM IST

ABOUT THE AUTHOR

...view details