ಬೆಂಗಳೂರು:ರಾಜ್ಯದಲ್ಲಿಂದು ಒಂದೇ ದಿನ 2010 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 9,73,657ಕ್ಕೆ ಏರಿಕೆ ಆಗಿದೆ. 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 12,449ಕ್ಕೆ ಏರಿದೆ.
ಇಂದು 677 ಮಂದಿ ಗುಣಮುಖರಾಗಿದ್ದು 9,45,594 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 15,595 ಇದ್ದು, 136 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.