ಬೆಂಗಳೂರು: ರಾಜ್ಯದಲ್ಲಿಂದು ಮತ್ತೊಮ್ಮೆ ಗುಣಮುಖರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು ಒಂದೇ ದಿನ 52,253 ಸೋಂಕಿತರು ಕೊರೊನಾ ವಿರುದ್ಧ ಗೆದ್ದು ಬಂದಿದ್ದಾರೆ.
ರಾಜ್ಯದಲ್ಲಿ ತಗ್ಗಿದ ಕೊರೊನಾ: ದಾಖಲೆಯ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖ - ಕೊರೊನಾ ಸಾವು
ರಾಜ್ಯದಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಜೊತೆಗೆ ಸೋಕಿನಿಂದ ಗುಣಮುಖರಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
coron
ಇನ್ನು ಸೋಂಕಿತರ ಸಂಖ್ಯೆಯು ಇಳಿಕೆಯಾಗಿದ್ದು, 22,823 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 25,46,821ಕ್ಕೆ ಏರಿಕೆ ಆಗಿದೆ. ಈವರೆಗೆ 21,46,621 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ 3,72,373 ರಷ್ಟು ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 16.42 ರಷ್ಟು ಇದ್ದು, ಸಾವಿನ ಶೇಕಡಾವಾರು ಪ್ರಮಾಣ 1.75 ರಷ್ಟು ಇದೆ. ಕೋವಿಡ್ಗೆ 401 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 27,806 ಕ್ಕೆ ಏರಿದೆ. ಯುಕೆಯಿಂದ 147 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
Last Updated : May 28, 2021, 9:14 PM IST